ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಪಕ್ಷ ನಿಷ್ಠೆ ಬಗ್ಗೆ ಮಾತನಾಡುವ ಹಕ್ಕು ಕರಿಯಪ್ಪಗೆ ಇಲ್ಲ: ಜಾಫರ್

Rashmi Kasaragodu
Updated On : 30 Apr 2014, 11:52 am

ಸಿಂಧನೂರು: ಶಾಸಕ ಹಂಪನಗೌಡ ಬಾದರ್ಲಿ ಅವರ ಪಕ್ಷ ನಿಷ್ಠೆಯ ಬಗ್ಗೆ ಮಾತನಾಡುವ ಹಕ್ಕು ಕೆ.ಕರಿಯಪ್ಪನವರಿಗೆ ಇಲ್ಲ ಎಂದು ನಗರಸಭೆ ಅಧ್ಯಕ್ಷ ಜಾಫರ್‌ಅಲಿ ಜಾಗೀರದಾರ ಹೇಳಿದರು.
ಜಿಪಂ ಮಾಜಿ ಸದಸ್ಯ ಕೆ.ಕರಿಯಪ್ಪನವರು ಇತ್ತೀಚೆಗೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ 'ಲೋಕಸಭಾ ಚುನಾವಣೆಯ ಮತಗಟ್ಟೆಗಳಲ್ಲಿ ಕಾಂಗ್ರೆಸ್ ಪಕ್ಷದ ಏಜೆಂಟರು ಇರಲಿಲ್ಲ' ಎಂದು ಹೇಳಿದ್ದಕ್ಕೆ ಜಾಫರ್ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದರು. ದಿನಕ್ಕೊಂದು ಪಕ್ಷ ಬದಲಿಸುವ ಕರಿಯಪ್ಪನವರಿಂದ ಹಂಪನಗೌಡರು ಪಕ್ಷ ನಿಷ್ಠೆಯ ಪಾಠ ಕಲಿಯಬೇಕಾಗಿಲ್ಲ. ಚುನಾವಣೆ ಮುಂಚೆ ಎಲ್ಲ  ಕಾರ್ಯಕರ್ತರ ಸಭೆ ನಡೆಸಿ ಪಕ್ಷದ ಅಭ್ಯರ್ಥಿ ಗೆಲವಿಗೆ ಬೇಕಾದ ಸರ್ವ ಕ್ರಮಗಳನ್ನು ಕೈಗೊಂಡಿದ್ದಾರೆ. ವೈಯಕ್ತಿಕ ಬೇರೆ, ಪಕ್ಷ ಬೇರೆ ಎಂದು ಭಾವಿಸಿದ ವ್ಯಕ್ತಿ ಹಂಪನಗೌಡರಲ್ಲ ಎಂದು ತಿರುಗೇಟು ನೀಡಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement