ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬೀಳ್ಕೊಡುಗೆ, ಕೃತಿ ಬಿಡುಗಡೆ

Rashmi Kasaragodu
Updated On : 30 Apr 2014, 11:50 am

ಕ.ಪ್ರ. ವಾರ್ತೆ   ರಾಯಚೂರು   ಏ.29
ನಗರದ ಎಲ್‌ವಿಡಿ ಮಹಾವಿದ್ಯಾಲಯದ ಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. ಕಾಲೇಜಿನ ಪ್ರಾಚಾರ್ಯ ಪ್ರೊ. ಎಸ್.ಎಂ. ಖೇಣೇದ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭಕ್ಕೆ ಬ್ರಹ್ಮಕುಮಾರಿ ಸ್ಮಿತಾ ಅಕ್ಕನವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಉಪ ಪ್ರಾಚಾರ್ಯ ಪ್ರೊ. ಎ. ಅಮರೇಗೌಡ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಬಿ.ಎ. ಅಂತಿಮ ವರ್ಷದ ವಿದ್ಯಾರ್ಥಿ ಮಂಜುನಾಥ ಗುತ್ತೇದಾರ ಬರೆದ ಚೈತನ್ಯದ ಚಿಗುರು ಎಂಬ ಕೃತಿಯನ್ನು ಬ್ರಹ್ಮಕುಮಾರಿ ಸಂಸ್ಥೆಯ ಬಿ.ಕೆ. ಸ್ಮಿತಾ ಅವರು ಲೋಕಾರ್ಪಣೆ ಮಾಡಿದರು.
ಮಮತಾ ಗಬ್ಬೂರು ಮತ್ತು ಮಲ್ಲಿಕಾರ್ಜುನ ಹೂಗಾರ್ ಅವರು ಕೃತಿ ಕುರಿತು ಮಾತನಾಡಿದರು. ಲೇಖಕ ಮಂಜುನಾಥ್ ತಮ್ಮ ಗುರುಗಳಾದ ವಿ.ಎಸ್. ಕಾಂತನವರ ಮತ್ತು ಮಾರ್ಗದರ್ಶಕಿ ಡಾ. ಅರುಣಾ ಹಿರೇಮಠ ಅವರ ಬೆಂಬಲಕ್ಕೆ ಅಭಿನಂದಿಸಿದರು. ಕಾಲೇಜಿನ ವಿದ್ಯಾರ್ಥಿಗಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement