ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬೈಕ್‌ಗೆ ಲಾರಿ ಡಿಕ್ಕಿ: ಬಾಲಕಿ ಸಾವು

Rashmi Kasaragodu
Updated On : 30 Apr 2014, 11:51 am

ಲಿಂಗಸ್ಗೂರು: ತಾಲೂಕಿನ ಬೀದರ್ ಶ್ರೀರಂಗಪಟ್ಟಣ ಪಟ್ಟಣ ರಾಜ್ಯ ಹೆದ್ದಾರಿಯ ಅಮರೇಶ್ವರ ಕ್ರಾಸ್ ಬಳಿ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕಿಯೊಬ್ಬಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಗಳವಾರ ಜರುಗಿದೆ. ಗೌಡೂರು ಗ್ರಾಮದ ಬಸವರಾಜ ನಾಯಕ ಹಾಗೂ ಭಾಗ್ಯಲಕ್ಷ್ಮೀ ಯಲ್ಲಪ್ಪ ಇಂಗಳಗಿ(14) ಇವರು ಬೈಕ್ ಮೇಲೆ ಅಮರೇಶ್ವರ ದೇವರ ದರ್ಶನ ಪಡೆದು ಪುನಃ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಅಮರೇಶ್ವರ ಕ್ರಾಸ್ ಬಳಿ ಹಿಂದಿನಿಂದ ಬಂದ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಭಾಗ್ಯಲಕ್ಷ್ಮೀ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಈ ಕುರಿತು ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement