ನಗರೇಶ್ವರ ದೇವಸ್ಥಾನದಲ್ಲಿ ಕನ್ನಿಕಾ ಪರಮೇಶ್ವರಿ ಅಗ್ನಿಪ್ರವೇಶ ದಿನ
ಮುದಗಲ್: ಸ್ಥಳೀಯ ನಗರೇಶ್ವರ ದೇವಸ್ಥಾನದಲ್ಲಿ ಕನ್ನಿಕಾ ಪರಮೇಶ್ವರಿ ಅಗ್ನಿಪ್ರವೇಶ ದಿನವನ್ನು ವಾಸವಿ ಸಮಾಜದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಲೋಕಕಲ್ಯಾಣಾರ್ಥ ದೇವಸ್ಥಾನದಲ್ಲಿ ಹೋಮ ಮತ್ತು ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ವಾಸವಿ ಸಮಾಜದ ಭಕ್ತರೆಲ್ಲ ಕೂಡಿ ಕನ್ನಿಕಾ ಪರಮೇಶ್ವರಿ ದೇವಿಯ ಅಗ್ನಿಪ್ರವೇಶ ದಿನವನ್ನು ಶ್ರದ್ಧಾ ಭಕ್ತಯಿಂದ ಆಚರಿಸಿದರು. ಲಕ್ಷ್ಮೀಪತಿ ತಾವರಗೇರಿ, ಹನುಮಂತಯ್ಯ ಕಂಪ್ಲಿ, ಹೇಮಂತ ನಾಗಲಾಪುರ, ಯೋಗೇಶಪ್ಪ ಗೌರೀಪುರ, ಮಲ್ಲಯ್ಯ ಸುರಪುರ, ದೇವಣ್ಣ ಸುರಪುರ ಸೇರಿದಂತೆ ವಾಸವಿ ಸಮಾಜದ ನೂರಾರು ಭಕ್ತರಿದ್ದರು.