ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಾ.31ರವರೆಗೆ ನೀರು ಪೂರೈಕೆ: ಶಾಸಕ ಬಾದರ್ಲಿ

Lingaraj Badiger
Updated On : 6 Feb 2014, 12:40 pm

ಸಿಂಧನೂರು: ತುಂಗಾಭದ್ರಾ ಎಡದಂಡೆ ನಾಲೆಗೆ ಮಾ.31ರ ವರೆಗೆ ನೀರು ಪೂರೈಕೆಯಾಗುತ್ತದೆ. ಯಾರಿಗೂ ಆತಂಕಬೇಡ. ಆದರೆ ಜಲಾಶಯದ ನೀರಿನ ಪ್ರಮಾಣ ಆಧರಿಸಿ ಹರಿವಿನ ಪ್ರಮಾಣದಲ್ಲಿ ಸ್ವಲ್ಪ ಮಟ್ಟಿಗೆ ವ್ಯತ್ಯಾಸವಾಗುತ್ತದೆ. ಏನೇ ಆದರೂ ರೈತರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿರುವುದಾಗಿ ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಂಗಭದ್ರಾ ಮಂಡಳಿಯ ನಿಯಮಗಳನ್ನು ತಿದ್ದುಪಡಿ ಮಾಡಲು ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಶಾಸಕರು, ಸಚಿವರು ಚಿಂತನೆ ನಡೆಸಿದ್ದು ಫೆ.7ರಂದು ಹೈದ್ರಾಬಾದ್‌ನಲ್ಲಿ ಮಂಡಳಿ ಸಭೆ ನಡೆಯಲಿದೆ. ಮೂರು ಜಿಲ್ಲೆಗಳ ಸಚಿವರು ಮತ್ತು ಶಾಸಕರು ಸಭೆಯಲ್ಲಿ ಭಾಗವಹಿಸುವುದಾಗಿ ಹೇಳಿದರು. ಬಚಾವತ್ ಆಯೋಗದನ್ವಯ ತುಂಗಭದ್ರಾ ಮಂಡಳಿಯ ಅಧೀಕ್ಷಕ ಎಂಜಿನಿಯರರು ಆಂಧ್ರಪ್ರದೇಶಕ್ಕೆ ಸೇರಿದವರಿದ್ದು, ರಾಜ್ಯ ನೀರಾವರಿ ತಜ್ಞರ, ನೀರಾವರಿ ಕಾರ್ಯದರ್ಶಿಗಳು ಮತ್ತು ಕಾನೂನು ತಜ್ಞರ ಸಭೆ ಮಾಡುವ ಮೂಲಕ ಕರ್ನಾಟಕ ಸರ್ಕಾರದಿಂದಲೂ ಒಬ್ಬ ಅಧೀಕ್ಷಕ ಎಂಜನೀಯರರು ಮಂಡಳಿಯಲ್ಲಿರುವಂತೆ ನಿಯಮ ತಿದ್ದುಪಡಿಯಾಗಬೇಕಾಗಿದೆ ಎಂದು ವಿವರಿಸಿದರು. ಈ ವೇಳೆ ನಗರಸಭೆ ಅಧ್ಯಕ್ಷ ಸೈಯದ್ ಜಾಫರ್‌ಅಲಿ ಜಾಗೀರದಾರ್, ಜೆಸ್ಕಾಂ ಇಇ ಪಟ್ಟಣಶೇಟ್ಟಿ, ಎಇಇ ಚಂದ್ರಶೇಖರ ದೇಸಾಯಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement