'ಹಿಂದುಳಿದ ಸಮುದಾಯ ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿಯಾಗಲಿ'
ದೇವದುರ್ಗ: ಹಿಂದುಳಿದ ಸಮುದಾಯಗಳಿಗೆ ಸೇರಿದ ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿ ಹೊಂದಬೇಕೆಂದು ಶಾಸಕ ಎ. ವೆಂಕಟೇಶ ನಾಯಕ ಕರೆ ನೀಡಿದರು.
ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಸಮತಾ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ತಾಲೂಕಿನ ಶೈಕ್ಷಣಿಕ ಪ್ರಗತಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುತ್ತದೆ. ಗ್ರಾಮೀಣ ಭಾಗದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಪ್ರಗತಿಗೆ ದುಡಿಯುವಂತೆ ಮನವಿ ಮಾಡಿದರು.
ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಂಗಾವತಿ ಪಿಎಸ್ಐ ಹನುಮರೆಡ್ಡಿ, ರಾಯಚೂರಿನ ಉಪ ನೋಂದಣಾಧಿಕಾರಿ ರಾಮಚಂದ್ರಪ್ಪ, ಕರಿಗೂಳಿ, ಡಾ. ಹನುಮಂತಪ್ಪ ಮಾನಸಗಲ್, ಶ್ರೀನಿವಾಸ ಮರಡ್ಡಿ, ದಲಿತ ಮುಖಂಡರಾದ ರಂಗಪ್ಪ ಕೋತಿಗುಡ್ಡ, ಕನಕಪ್ಪ, ಕಾಶಪ್ಪ ಬುದ್ಧ, ಶ್ರೀಕಾಂತ ಬಲ್ಲಿದ್, ಕನಕ ಪುರಸ್ಕೃತ ಮುನಿಯಪ್ಪ ನಾಗೋಲಿ, ಕುವೆಂಪು ಪುರಸ್ಕೃತ ಎಚ್.ಡಿ. ಶಿವರಾಜ ಸೇರಿ ಅನೇಕರನ್ನು ಸನ್ಮಾನಿಸಲಾಯಿತು.
ಸಾನ್ನಿಧ್ಯವನ್ನು ರೇವಣಸಿದ್ದೇಶ್ವರ ಮಹಾಮಠ ಮನಸೂರ, ಧಾರವಾಡದ ಬಸವರಾಜ ದೇವರು, ಗಬ್ಬೂರಿನ ಬೂದಿಬಸವೇಶ್ವರ ಶಿವಾಚಾರ್ಯರು ವಹಿಸಿದ್ದರು. ಸಿಂಧನೂರಿನ ಬಸವ ಕೇಂದ್ರದ ವೀರಭದ್ರಪ್ಪ ಗೌಡ ಕುರುಕುಂದಿ, ರಮೇಶ ಬಲ್ಲಿದ್, ಜಿಪಂ ಮಾಜಿ ಸದಸ್ಯರಾದ ಸದಾಶಿವಪ್ಪಯ್ಯ ತಾತಾ, ಗುರುವಿನ ಸಿದ್ದಯ್ಯ ತಾತಾ, ಜಿಲ್ಲಾ ಸೇವಾ ದಳದ ಅಧ್ಯಕ್ಷ ಬಾಪೂಗೌಡ ಚಿಕ್ಕಹೊನ್ನಕುಣಿ, ರಾಣಿ ರಿಚರ್ಡ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮನಗೌಡ ನಾಗಡದಿನ್ನಿ, ಕಾಂಗ್ರೆಸ್ ಹಿರಿಯ ಮುಖಂಡ ಹುಸೇನಸಾಬ್ ನೀಲವಂಜಿ, ಸಂಸ್ಥೆ ಅಧ್ಯಕ್ಷ ಬಸವರಾಜ ಸಿಂಗ್ರಿ ಇದ್ದರು.