ಲೈಂಗಿಕ ಅಲ್ಪಸಂಖ್ಯಾತರನ್ನು ನಿರ್ಲಕ್ಷಿಸಬೇಡಿ: ನ್ಯಾ. ಭಾರತಿ
ಸಿಂಧನೂರು: ಕುಟುಂಬ ಮತ್ತು ಸಮಾಜದಲ್ಲಿನ ನಾಗರಿಕರು ಲೈಂಗಿಕ ಅಲ್ಪಸಂಖ್ಯಾತರನ್ನು ನಿರ್ಲಕ್ಷಿಸಬೇಡಿ. ಕಾನೂನಿನ ಅಡಿಯಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಹಕ್ಕುಗಳು ಇವೆ. ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ಭಾರತಿ ಎಸ್. ರಾಯಣ್ಣನವರ ಹೇಳಿದರು. ಅವರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ತಾಲೂಕು ನ್ಯಾಯವಾದಿಗಳ ಸಂಘ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಲೈಂಗಿಕ ಅಲ್ಪಸಂಖ್ಯಾತ ವ್ಯಕ್ತಿಗಳ ಬಗ್ಗೆ ಕುರಿತು ಕಾನೂನು ಅರಿವು ನೆರವು ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ಎಪಿಪಿ ಶೇಖರಪ್ಪ ಶಾಲಿಗನೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ಪ್ರಶಾಂತಕುಮಾರ, ಬಸವರಾಜ, ಕಾತ್ಯಾಯಿನಿ, ಶೇಖರಪ್ಪ ಧುಮತಿ ವಕೀಲರು, ಎಎಸ್‌ಐ ಹುಸೇನಪ್ಪ ಇದ್ದರು. ಮೌಲಾಲಿ ನಿರೂಪಿಸಿದರು. ಅನಿತಾ ಪ್ರಾರ್ಥಿಸಿದರು. ಖಾಜಿ ಮಲಿಕ್ ವಂದಿಸಿದರು.