ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅರೆಕಾಲಿಕ ಉಪನ್ಯಾಸಕರ ವೇತನ ಹೆಚ್ಚಳಕ್ಕೆ ಆಗ್ರಹ

Vishwanath S
Updated On : 8 Feb 2014, 1:20 am

ಸುರಪುರ: ಪದವಿ ಮತ್ತು ಪಪೂ ಕಾಲೇಜಿನ ಅರೆಕಾಲಿಕೆ ಉಪನ್ಯಾಸಕರಿಗೆ ವೇತನ ಹೆಚ್ಚಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ತಾಲೂಕು ಘಟಕ ಶುಕ್ರವಾರ ತಹಸೀಲ್ ಕಚೇರಿಯ ಎದುರು ಪ್ರತಿಭಟನೆ ನಡೆಸಿತು.
ಎಬಿವಿಪಿ ಮುಖಂಡರು ಮಾತನಾಡಿ, ಈಗಾಗಲೇ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದ್ದು ಅವರುಗಳಿಗೆ ತಿಂಗಳಿಗೆ 8-10 ಸಾವಿರ ರೂ. ವರೆಗೆ ವೇತನ ನೀಡುತ್ತಿದ್ದು ಅದು ಕೂಡಾ ಸಮಯಕ್ಕೆ ಸರಿಯಾಗಿ ನೀಡುತ್ತಿಲ್ಲ ಎಂದು ಆರೋಪಿಸಿದರು. ಈಗಿನ ದುಬಾರಿ ಯುಗದಲ್ಲಿ ಬೆಲೆಗಳು ಗಗನಕ್ಕೇರಿದ್ದು ಸದ್ಯಕ್ಕೆ ನೀಡುತ್ತಿರುವ ಸಂಬಳ ಯಾವುದಕ್ಕೂ ಸಾಲುತ್ತಿಲ್ಲ. ಆದಕಾರಣ ವೇತನವನ್ನು ಪರಿಷ್ಕರಿಣೆಗೊಳಿಸಿ ತಿಂಗಳಿಗೆ 25 ಸಾವಿರ ರೂ. ನೀಡಬೇಕು ಎಂದು ಆಗ್ರಹಿಸಿದರು.
ಒಂದು ವೇಳೆ ಇದಕ್ಕೆ ಸ್ಪಂದಿಸದಿದ್ದರೆ ಎಬಿವಿಪಿ ವಿದ್ಯಾರ್ಥಿಗಳಿಂದ ರಾಜ್ಯಾದ್ಯಂತ ಕಾಲೇಜುಗಳನ್ನು ಬಂದ್ ಮಾಡಲಾಗುವುದು ಹಾಗೂ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ನಂತರ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಎಬಿವಿಪಿ ಅಧ್ಯಕ್ಷ ಶರಣುನಾಯಕ, ನಗರ ಕಾರ್ಯದರ್ಶಿ ಗಂಗಾಧರನಾಯಕ ಹಾಗೂ ಉಪನ್ಯಾಸಕರಾದ ಉಪೇಂದ್ರನಾಯಕ, ಸಂದೀಪ ನಾಯಕ, ಶರಣುನಾಯಕ, ಕಾರ್ಯಕರ್ತರಾದ ಎಚ್.ಎಸ್.ನಾಯಕ, ಶ್ರೀರಾಮ ರಾಠೋಡ, ಸೀತಾರಾಮ ರಾಠೋದ, ರಾಘವೇಂದ್ರ, ಗಂಗಾಧರ ಪತ್ತಾರ, ಕುಮಾರ ಚಿಕ್ಕನಳ್ಳಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement