ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಲ್ಲಾನೆ ನಿರ್ವಹಣೆಯತ್ತ ನಿರ್ಲಕ್ಷ್ಯ

Vishwanath S
Updated On : 8 Feb 2014, 1:24 am

ಕ.ಪ್ರ. ವಾರ್ತೆ ,  ರಾಯಚೂರು ,  ಫೆ.7
ನಗರದ ತೀನ್ ಕಂದೀಲ್ ವೃತ್ತದ ಬಳಿಯಿರುವ ಐತಿಹಾಸಿಕ ಹಿನ್ನೆಲೆಯಿರುವ ಸ್ಮಾರಕ ಕಲ್ಲಾನೆಯ ರಕ್ಷಣೆ ಮತ್ತು ದುರಸ್ತಿಗೆ ಆಗ್ರಹಿಸಿ ವೀರ ಸಾವರ್ಕರ್ ಯೂಥ್ ಅಸೋಸಿಯೇಷನ್ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ನಗರಸಭೆಯ ಚಿಹ್ನೆ, ಐತಿಹಾಸಿಕ ಸ್ಮಾರಕವಾಗಿರುವ ನಗರದ ತೀನ್ ಕಂದೀಲ್‌ನಲ್ಲಿರುವ ಕಲ್ಲಾನೆಯ ನಿರ್ವಹಣೆಯಲ್ಲಿ ಆಡಳಿತ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಿದರು.
ತೀನ್ ಕಂದೀಲ್ ನಗರದ ಹೃದಯ ಭಾಗದಲ್ಲಿಯೇ ಇದ್ದು ಅದರ ಬಳಿಯೇ ಇರುವ ಕಲ್ಲಾನೆಯ ರಕ್ಷಣೆಗೆ ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಕಳೆದ ಕೆಲ ತಿಂಗಳ ಹಿಂದೆಯೇ ಕಲ್ಲಾನೆಯ ಒಂದು ದಂತ ಮುರಿದಿದ್ದು ಅದರ ದುರಸ್ತಿಯತ್ತ ಆಡಳಿತ ಗಮನಹಗರಿಸಿಲ್ಲ ಎಂದು ಟೀಕಿಸಿದರು.
ನಗರಸಭೆಯು ಕಲ್ಲಾನೆಯನ್ನೇ ತನ್ನ ಲಾಂಛನವಾಗಿಸಿಕೊಂಡಿದೆ. ಆದರೆ ನಗರಸಭೆಯೇ ಕಲ್ಲಾನೆಯ ನಿರ್ವಹಣೆಯತ್ತ ನಿರ್ಲಕ್ಷ್ಯ ತೋರಿದೆ. ಕಾರಣ ಕೂಡಲೇ ಕಲ್ಲಾನೆಯ ಶಿಸ್ತುಬದ್ಧ ನಿರ್ವಹಣೆ ಮತ್ತು ರಕ್ಷಣೆಗೆ ಗಮನಹರಿಸಬೇಕು. ಮುರಿದ ದಂತದ ಭಾಗದ ಅಳವಡಿಕೆಗೆ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಸಂಘಟನೆಯವರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಪ್ರಶಾಂತಗೌಡ, ವಿನಾಯಕರಾವ್, ಶಿವಕುಮಾರ್ ಕಾವಲಿ, ಕಲ್ಲಾನೆ ಗಜಾನನ ಸಮಿತಿ ಪದಾಧಿಕಾರಿಗಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement