'ಕಿರಿಕ್'ಗೆ ಈ ಭಾಗದ ಭಾಷೆಯೇ ವಿಶೇಷ: ನಾಗರಾಜ ಚಿತ್ರದುರ್ಗ
ಸಿಂಧನೂರು: ಕಿರಿಕ್ ಚಲನಚಿತ್ರವನ್ನು ಯುವ ಕಲಾವಿದರ ಪ್ರೋತ್ಸಾಹದಿಂದ ಸಿಂಧನೂರು ನಗರ ಹಾಗೂ ಹಳ್ಳಿಗಳ ಕೊಳಚೆ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗುವುದು. ವಿಶೇಷವಾಗಿ ಉತ್ತರ ಕರ್ನಾಟಕ ಭಾಷೆಯೇ ವಿಶೇಷ ಆಕರ್ಷಣೆ ಎಂದು ಸಹಾಯಕ ನಿರ್ದೇಶಕ ನಾಗರಾಜ ಚಿತ್ರದುರ್ಗ ಹೇಳಿದರು.
ನಗರದ ನಗರಸಭೆಯ ಹಿಂದುಗಡೆ ಇರುವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಊರಿನ ಭಾಷೆ ಇಲ್ಲಿಯ ವಾತಾವರಣ ಕನ್ನಡ ಚಿತ್ರರಂಗಕ್ಕೆ ಅವಶ್ಯ. ಇಲ್ಲಿನ ಫಿರೋಜ್ಖಾನ್ರ ಪ್ರೋತ್ಸಾಹದಿಂದ ಇಲ್ಲಿಯೇ ಕಲಾವಿದರನ್ನು ಆಯ್ಕೆ ಮಾಡಿ ಚಿತ್ರೀಕರಿಸಲಾಗುವುದು. ನಂತರ ಬೆಂಗಳೂರಿನಲ್ಲಿ ಸ್ವಲ್ಪ ಚಿತ್ರೀಕರಿಸಿ ಬಿಡುಗಡೆಗೊಳಿಸಲಾಗುವುದು ಎಂದರು.
ಸತತ ಪ್ರಯತ್ನ ಅವಶ್ಯ: ಚಿತ್ರ ಬಿಡುಗಡೆಗೊಳಿಸಲು ರಾಯಚೂರು, ಹೊಸಪೇಟೆ, ಹುಬ್ಬಳ್ಳಿ, ಮೈಸೂರು ಸೇರಿದಂತೆ ಇನ್ನೂ ಅನೇಕ ಊರುಗಳ ಜನರ ಪ್ರೋತ್ಸಾಹ ಹೆಚ್ಚಿದೆ. ಈ ಭಾಗದಲ್ಲಿ ರಾಜು ತಾಳಿಕೋಟೆ ಸೇರಿದಂತೆ ಇನ್ನೂ ಅನೇಕ ಒಳ್ಳೆ-ಒಳ್ಳೆಯ ಕಲಾವಿದರು ಬೆಳೆವಣಿಗೆಯಾಗಿದ್ದಾರೆ ಎಂದು ಹೇಳಿದರು. ಕಿರಿಕ್ ಚಿತ್ರದ ಮೂಲ ಉದ್ದೇಶ- ಹಣವನ್ನು ಬಡ್ಡಿ ಕೊಡುವುದರ ದುಷ್ಪರಿಣಾಮ ಏನು ಎನ್ನುವುದು ಎಂದು ವಿವರಿಸಿದರು.