ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

10 ದಿನದಲ್ಲಿ ರೇಲ್ವೆ ಮೇಲ್ಸೇತುವೆ ಪೂರ

Rashmi Kasaragodu
Updated On : 12 Feb 2014, 3:20 am

ರಾಯಚೂರು: ನಗರದ ಬಸವೇಶ್ವರ ವೃತ್ತದ ಬಳಿ ನಿರ್ಮಾಣ ಹಂತದಲ್ಲಿರುವ ರೇಲ್ವೆ ಮೇಲ್ಸೇತುವೆ ಕಾಮಗಾರಿಯು 10 ದಿನದಲ್ಲಿ ಪೂರ    ಗೊಳ್ಳಲಿದೆ ಎಂದು ರೇಲ್ವೆ ಸಿಕಿಂದ್ರಾಬಾದ್ ವಲಯದ ಮುಖ್ಯ ವ್ಯವಸ್ಥಾಪಕ ಪಿ.ಕೆ. ಶ್ರೀವಾಸ್ತವ್ ಹೇಳಿದರು.
ನಗರದಲ್ಲಿ ಮಂಗಳವಾರ ಸ್ಥಳೀಯ ರೇಲ್ವೆ ಇಲಾಖೆಯ ವಾರ್ಷಿಕ ಪರಿಶೀಲನೆ ನಡೆಸಿದ ವೇಳೆ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, 10 ದಿನದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಮುಗಿದು ಜನಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ ಎಂದು ಹೇಳಿದರು.
ಸುರಕ್ಷಿತ ಪ್ರಯಾಣ, ಜನರ ಕೋರಿಕೆ ಮೇರೆಗೆ ಅಗತ್ಯವಿರುವ ಸವಲತ್ತು ಒದಗಿಸುವಲ್ಲಿ ಇಲಾಖೆ ಬದ್ಧವಾಗಿದೆ. ಈಚಿನ ದಿನಗಳಲ್ಲಿ ರೈಲಿನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದ ಹಿನ್ನೆಲೆ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ರೈಲಿನಲ್ಲಿ ಸ್ಫೋಟಕ ವಸ್ತುಗಳನ್ನು ಕೊಂಡೊಯ್ಯದಂತೆ ಪ್ರಯಾಣಿಕರಿಗೆ ತಿಳಿಹೇಳುವ ಕಾರ್ಯ ಆಗಬೇಕಿದೆ ಎಂದು ಹೇಳಿದರು.
ಈ ವೇಳೆ ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ಅವರು ಗದ್ವಾಲ್-ರಾಯಚೂರು ರೇಲ್ವೆ ಸಂಚಾರ ಸಮಯ ಬದಲಾವಣೆ, ವಿದ್ಯಾಭಾರತಿ ರೇಲ್ವೆ ಗೇಟ್ ಬಳಿ ಕೆಳ ಸೇತುವೆ ನಿರ್ಮಾಣ, ರಾಯಚೂರು ರೈಲು ನಿಲ್ದಾಣಕ್ಕೆ ಬರುವ ರೈಲುಗಳ ನಿಲುಗಡೆಯ ಸಮಯದ ವಿಸ್ತರಣೆ ಬಗ್ಗೆ ಮನವಿ ಮಾಡಿದರು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ವಲಯದ ಆರ್‌ಡಿಎಂ ಮನೋಜ್ ಜೋಷಿ, ಸ್ಟೇಷನ್ ಮ್ಯಾನೇಜರ್ ಎಂ. ವಿವೇಕಾನಂದ, ಓಂ ಪ್ರಕಾಶ್, ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ತ್ರಿವಿಕ್ರಮ್ ಜೋಷಿ, ಕಮಲಕುಮಾರ್, ಜವಾಹರ್ ಜೈನ್, ಕರವೇ ಜಿಲ್ಲಾಧ್ಯಕ್ಷ ಅಶೋಕ ಕುಮಾರ ಜೈನ್ ಮತ್ತಿತರರಿದ್ದರು.




Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement