ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ತಾತ್ವಿಕ ನೆಲೆಗಟ್ಟಿನ ಗಜಲ್ ರಚಿಸಿ: ಆರೀಫ್ ರಾಜಾ

Rashmi Kasaragodu
Updated On : 12 Feb 2014, 3:22 am


ಮಸ್ಕಿ: ಗಜಲ್‌ಗಳಲ್ಲಿ ಜೀವಂತಿಕೆಯನ್ನು ತುಂಬುವತ್ತ ಗಜಲ್‌ಕಾರರು ಗಮನಹರಿಸಬೇಕು. ಕೇವಲ ಛಂದಸ್ಸಿನ ರೂಪ ನೀಡಿದರೆ ಅದು ಗಜಲ್ ಆಗದು. ಇವುಗಳಿಗೆ ತಾತ್ವಿಕತೆಯ ಜೀವ ತುಂಬುವುದು ಅವಶ್ಯ ಎಂದು ಖ್ಯಾತ ಯುವ ಸಾಹಿತಿ ಆರೀಫ್ ರಾಜಾ ತಿಳಿಸಿದರು.
ಸಮ್ಮೇಳನದ ಗಜಲ್ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾತ್ವಿಕತೆಯನ್ನು ಸಾರುವ ಗಜಲ್‌ಗಳು ಹೆಚ್ಚೆಚ್ಚು ಮೂಡಿಬರಬೇಕಿದೆ. ವಚನಗಳಿಗೆ ಅದರದ್ದೇ ಆದ ತತ್ವಜ್ಞಾನವಿದ್ದು, ಗಜಲ್‌ಗಳಿಗೆ ಅಂತಹ ಹಿನ್ನೆಲೆಯಿಲ್ಲ. ಅದರಲ್ಲೂ ಉರ್ದು ಗಜಲ್‌ಗಳಿಗೆ ಸೂಫಿ ಸಂತರು ಆಗಿನ ಬದುಕು ಮತ್ತು ಧಾರ್ಮಿಕ ನೆಲೆಗಟ್ಟು ನೀಡಿದ್ದರು ಎಂದು ಹೇಳಿದರು.
ತಾತ್ವಿಕತೆಯಿರಲಿ: ಕನ್ನಡ ಗಜಲ್‌ಗಳ ರಚನೆಕಾರರಿಗೆ ಛಂದಸ್ಸು ಪಾಲನೆ ಜತೆಜತೆಗೆ ಕಾವ್ಯ ತುಂಬುವ ಎರಡು ಸವಾಲುಗಳು ಎದುರಾಗುತ್ತವೆ ಎಂದ ಅವರು, ಗಜಲ್‌ನಲ್ಲಿ ಯಾವ ತಾತ್ವಿಕತೆ ಅಡಗಿರಬೇಕೆಂಬುದರ ಅರಿವು ಗಜಲ್ ಕಾರರಿಗಿರಬೇಕೆಂದು ಹೇಳಿದರು.
ಸೂಫಿ ಸಂತರು ಹಿಂದೊಮ್ಮೆ ದೈವ, ಸಮಾಜವನ್ನೇ ಪ್ರಶ್ನಿಸುವ ಕಾರ್ಯ ಮಾಡಿದ್ದರು. ಅಂಥ ಪ್ರಯತ್ನ ಕನ್ನಡ ಗಜಲ್‌ಗಳಲ್ಲಿ ಕಾಣಬೇಕಿದೆ. ಇವುಗಳು ಹೈ.ಕ. ಭಾಗಕ್ಕೆ ಸೀಮಿತವಾಗಿದ್ದು, ಇನ್ನೂ ಹೆಚ್ಚಿನ ಪ್ರೋತ್ಸಾಹ ಅವಶ್ಯ ಎಂದರು.
ಕನ್ನಡ ಗಜಲ್‌ಗಳ 20ಕ್ಕೂ ಹೆಚ್ಚಿನ ಸಂಕಲನಗಳು ಹೊರಬಂದಿವೆ. ಖ್ಯಾತ ಗಜಲ್‌ಕಾರರಾದ ದಿ. ಶಾಂತರಸ, ಮುಕ್ತಾಯಕ್ಕ, ಚಿದಾನಂದ ಸಾಲಿ ಸೇರಿ ಅನೇಕರು ಗಜಲ್‌ಗಳಿಗೆ ಜೀವ ತುಂಬಿದ್ದಾರೆಂದು ಹೇಳಿದರು.
ಗಜಲ್ ಗೋಷ್ಠಿಯಲ್ಲಿ ರವಿಕುಮಾರ್ ಹಂಪಿ, ಪ್ರಕಾಶ ಜಾಲಹಳ್ಳಿ, ರಮೇಶ ಅರೋಲಿ, ಕೊರೇನಲ್, ಜಾಂಪಣ     ಆಶಿಹಾಳ, ರಮಾದೇವಿ ಶಂಭೋಜಿ, ಚಂದ್ರಶೇಖರ್ ದೊಡ್ಡಮನಿ, ಹನುಮಂತರಾಯ ಶಾಖೆ ಸೇರಿ ಅನೇಕರಿದ್ದರು.




ನಾನು ಬದಲಾದೆ
ಬದಲಾವಣೆ ಜಗದ ನಿಯಮ, ನಾನು ಬದಲಾದೆ
ಕೈಗೊಂಡ ತಪವು ಈಡೇರಲಿಲ್ಲ ನಾನು ಬದಲಾದೆ೤
ಸಂಬಂಧ ಸೂತ್ರ ಹರಿಯದಂತೆ ನಿಂತಿದ್ದೆ
ಅವರವರು ಬೆಸೆದಾಗ ನಾನು ಬದಲಾದೆ೤
ಅನ್ನ ನೀರು ಸೂರು ಹಂಚಿ ಹೊದಿಕೆಯಾಗಿತ್ತು
ಅದನ್ನವರು ಈಗ ದಕ್ಕಿಸಿಕೊಂಡಾಗ ನಾನು ಬದಲಾದೆ೤
ದೊರಕಿದ ಬದುಕು ಈಡೇರದ ಕನಸಿನೊಂದಿಗೆ ಬೆಸೆದುಕೊಂಡಿದೆ
ಯಾರೋ ನಾಯಕ ಬದಲಾಗು ಅಂದರು, ನಾನು ಬದಲಾದೆ॥
ಚ ಗಜಲ್‌ಕಾರ: ಜಾಂಪಣ     ಆಶಿಹಾಳ



ನೆನಪಿನ ತಂತಿ ಮೀಟುತ್ತದೆ ಒಮ್ಮೊಮ್ಮೆ
ವಿಪರೀತ ನೋವೊಂದು ಎದೆಯೊಳಗಿಂದ ಹುಟ್ಟುತ್ತದೆ ಒಮ್ಮೊಮ್ಮೆ
ಎದೆತುಂಬ ತುಂಬಿದ್ದ ಹಾಡುಗಳನ್ನೆಲ್ಲಾ ಅವಳು ಅಳಿಸಿ ಹೋದಳು
ಆದರೂ ಅಳುವುದು ಈ ಕಿವುಡು ಜಗತ್ತಿಗೆ ಕೇಳಲೇ ಇಲ್ಲವಂತೆ,
ನನ್ನ ಪ್ರೇಮ ಪ್ರಲಾಪದ ಆರ್ತನಾದವು ಆಕಾಶವನ್ನು ಮುಟ್ಟುತ್ತದೆ ಒಮ್ಮೊಮ್ಮೆ
ಇನ್ನು ಅವಳನ್ನು ನೆನಪಿಸುವುದೇ ಇಲ್ಲವೆಂದು ದಿನವೂ ಶಪಥ ಮಾಡುತ್ತೇನೆ
ಆದರೂ ಈ ಬೆರಳು ಅವಳ ನೆನಪಿನ ತಂತಿಯನ್ನು ಮೀಟುತ್ತದೆ ಒಮ್ಮೊಮ್ಮೆ,
ಈ ದಿನದವರೆಗೂ ಈ ಕ್ಷಣದವರೆಗೂ ಅವಳ ಪ್ರೇಮದ ನೆನಪು ಸಾಯಲ್ಲ
ಅದು ಎದೆಯ ಒರಳನ್ನು ಒನಕೆಯಿಂದ ಕುಟ್ಟುತ್ತದೆ ಒಮ್ಮೊಮ್ಮೆ॥
ಚ ಗಜಲ್‌ಕಾರ- ಕೊರೇನಲ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement