ರಥ ವಾಹನದಲ್ಲಿ ಶಾಸಕ!
ಮಸ್ಕಿ: ಪಟ್ಟಣದಲ್ಲಿ ಮಂಗಳವಾರ ಆರಂಭಗೊಂಡ ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರ ಮೆರವಣಿಗೆಯ ವಾಹನದಲ್ಲಿ ಶಾಸಕ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಪ್ರತಾಪಗೌಡ ಪಾಟೀಲ್ ಅವರೂ ಕುಳಿತು ಸಾಗುವ ಮೂಲಕ ಚರ್ಚೆಗೆ ಗ್ರಾಸವಾಯಿತು. ಪ್ರತಿ ಬಾರಿ ಸಾಹಿತ್ಯ ಸಮ್ಮೇಳನಗಳು ಆಯೋಜನೆಗೊಂಡಾಗಲೆಲ್ಲ ಆಯಾ ಸಮ್ಮೇಳನದ ಸಮ್ಮೇಳನಾಧ್ಯಕ್ಷರನ್ನು ಮೆರವಣಿಗೆಯಲ್ಲಿ ಕರೆತರುವುದು ಪದ್ಧತಿ. ಆದರೆ ಮಸ್ಕಿಯಲ್ಲಿ ಮಂಗಳವಾರ ನಡೆದ ಮೆರವಣಿಗೆಯ ವಾಹನದಲ್ಲಿ ಸಮ್ಮೇಳನಾಧ್ಯಕ್ಷರಿದ್ದ ವಾಹನದಲ್ಲಿ ಖ್ಯಾತ ಸಾಹಿತಿ ನಾ. ಡಿಸೋಜಾ ಅವರಿದ್ದರು. ಆದರೆ ಅವರ ಜತೆಗೆ ಶಾಸಕ ಪ್ರತಾಪಗೌಡ ಪಾಟೀಲರೂ ವಾಹನವನ್ನೇರಿ ಕುಳಿತಿದ್ದು ಕಂಡ ಸಮ್ಮೇಳನಕ್ಕೆ ಹೊರಗಿನಿಂದ ಆಗಮಿಸಿದ್ದ ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರ ಬೇಸರದ ಮಾತು ಕೇಳಿಬಂದಿತು.