ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಸ್‌ಪಾಸ್ ನಿಯಮಗಳ ಸಡಿಲಿಕೆಗೆ ಮನವಿ

Rashmi Kasaragodu
Updated On : 13 Feb 2014, 11:29 am

ಸಿಂಧನೂರು: ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ನೀಡುವ ಸಾರ್ವಜನಿಕ ಬಸ್‌ಪಾಸ್‌ಗಳ ನಿಯಮಗಳನ್ನು ಸಡಿಲಗೊಳಿಸಬೇಕೆಂದು ಲಂಕೇಶ ಬಳಗದ ಇಮಾಮ್ ಎತ್ಮಾರಿ, ಅಮರೇಶ ಮಸ್ಕಿ, ಶಿವು ಬಳಗಾನೂರ ಮನವಿ ಮಾಡಿದ್ದಾರೆ. ಈ ಕುರಿತು ಡಿಪೋ ಮ್ಯಾನೇಜರ್‌ಗೆ ಮನವಿ ಮಾಡಿರುವ ಅವರು, ಸಿಂಧನೂರಿನಿಂದ ಬಳಗಾನೂರಿಗೆ ಬಸ್‌ಪಾಸ್ ಪಡೆದವರು ಬಳಗಾನೂರಿಗೆ ಹೋಗುವ ಎಲ್ಲಾ ಮಾರ್ಗಗಳಿಗೂ ಪಾಸನ್ನು ವಿಸ್ತರಿಸಬೇಕು. ಕೇವಲ ಒಂದೇ ಮಾರ್ಗಕ್ಕೆ ಅನುಮತಿ ನೀಡಿದರೆ ಆ ಮಾರ್ಗದ ಬಸ್ಸುಗಳು ಕಾರಣಾಂತರಗಳಿಂದ ಕೆಟ್ಟು, ಮಳೆ ಬಂದು ರಸ್ತೆ ಹದಗೆಟ್ಟು ನಿಂತ ಸಮಯದಲ್ಲಿ ಬೇರೆ ಮಾರ್ಗದ ಮೂಲಕ ಬಸ್ ಸಂಚಾರವಿದ್ದಾಗ ಪ್ರಯಾಣಿಸಲು ಅನುಕೂಲ ಮಾಡಿಕೊಡಬೇಕು. ಕೂಡಲೇ ಅಧಿಕಾರಿಗಳೊಡನೆ ಚರ್ಚಿಸಿ ಕ್ರಮ ಕೈಗೊಳ್ಳಬೇಕೆಂದು ಡಿಪೋ ಮ್ಯಾನೇಜರ್ ಒತ್ತಾಯಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement