ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಆದಿ ಮೌನಲಿಂಗೇಶ್ವರ ಜಾತ್ರೆ

Rashmi Kasaragodu
Updated On : 14 Feb 2014, 12:04 pm

ದೇವದುರ್ಗ: ತಾಲೂಕಿನ ವೀರಗೋಟ ಗ್ರಾಮದಲ್ಲಿ ಇತ್ತೀಚೆಗೆ ಆದಿ ಮೌನಲಿಂಗೇಶ್ವರ ಜಾತ್ರಾ ಮಹೋತ್ಸದ ಅಂಗವಾಗಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಈ ಸಂದರ್ಭ ಆಯೋಜಿಸಿದ್ದ ಸಮಾರಂಭದಲ್ಲಿ ಶಾಸಕ ವೆಂಕಟೇಶ ನಾಯಕ ಮಾತನಾಡಿ, ನಾಡಿನ ಧರ್ಮಗುರುಗಳು ಹಾಗೂ ಸೂಫಿ ಸಂತರು ಸಮಾಜದ ಪ್ರಗತಿಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆಂದರು.
ಬೃಹನ್ಮಠ ಜಾಲಹಳ್ಳಿಯ ಜಯಶಾಂತೇಶ್ವರ ಸ್ವಾಮಿಗಳು, ಬಂಥನಾಳ ಸಂಸ್ಥಾನ ಮಠದ ವೃಷಭಲಿಂಗ ಸ್ವಾಮೀಜಿ, ದೇವರಭೂಪುರದ ಅಮರೇಶ್ವರ ಗುರುಅಭಿನವ ಗಜದಂಡ ಸ್ವಾಮೀಜಿ, ರಾಣೆಬೆನ್ನೂರಿನ ಚಿದಾನಂದ ಭಾರತಿ ಸ್ವಾಮೀಜಿ ಹರಣಿ, ಅಡವಿಲಿಂಗ ಮಹಾರಾಜರು ವೀರಗೋಟ ಸಾನ್ನಿಧ್ಯ ವಹಿಸಿದ್ದರು.
ಲಿಂಗಸ್ಗೂರು ಶಾಸಕ ಮಾನಪ್ಪ ವಜ್ಜಲ್, ಧಾರವಾಡ ಕೃಷಿ ವಿವಿಯ ಡಾ. ಎಸ್.ಜಿ. ಮಹಾಜನಶೆಟ್ಟಿ, ಕರ್ನಾಟಕ ರಕ್ಷಣಾ ವೇದಿಕೆಯ ರಾಜಾಧ್ಯಕ್ಷ ಬಸವರಾಜ ಪಡಕೋಟೆ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಬಸವರಾಜ ಪಂಪಾಪತಿ, ಬಾಲಪ್ಪ ನಾಯಕ ಮರಡಿ, ವೀರಣ್ಣ ಬಳೆ, ಗುರುರಾಜರಾವ್ ದೇಸಾಯಿ, ತಾಪಂ ಮಾಜಿ ಅಧ್ಯಕ್ಷ ಆದನಗೌಡ ಬುಂಕಲದೊಡ್ಡಿ, ಕಾಂಗ್ರೆಸ್ ಯುವ ಮುಖಂಡ ಭೂತಪ್ಪ ಹೇರುಂಡಿ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement