ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಇಲಾಖೆ ಪರೀಕ್ಷೆ; ನಾಳೆ ನಿಷೇಧಾಜ್ಞೆ

Rashmi Kasaragodu
Updated On : 14 Feb 2014, 12:08 pm

ರಾಯಚೂರು: ನಗರದ ಯರಮರಸ್‌ನ ಡಯಟ್, ಆನಂದ ಪ್ರೌಢಶಾಲೆ ಮತ್ತು ಪೊಲೀಸ್ ಕಾಲೋನಿಯ ಸರ್ಕಾರಿ ಪ್ರೌಢಶಾಲೆ ಪರೀಕ್ಷಾ ಕೇಂದ್ರಗಳಲ್ಲಿ ಇಲಾಖಾ ಪರೀಕ್ಷೆಯ ಹಿನ್ನೆಲೆಯಲ್ಲಿ ಫೆ.15ರಿಂದ 26ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಆದೇಶ ಹೊರಡಿಸಿದ್ದು, ಪರೀಕ್ಷೆಗಳು ಸುಗಮ ಹಾಗೂ ಸುವ್ಯವಸ್ಥಿತವಾಗಿ ನಡೆಯುವಂತಾಗಲು ಕೇಂದ್ರಗಳ ಸುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಅವರು ಆದೇಶಿಸಿದ್ದಾರೆ.ಪರೀಕ್ಷೆಗಳು ನಡೆಯುವ ದಿನಗಳಲ್ಲಿ ಈ ನಿಷೇಧಾಜ್ಞೆ ಜಾರಿಯಲ್ಲಿರಲಿದ್ದು, ಪರೀಕ್ಷಾ ಸಿಬ್ಬಂದಿ ಮತ್ತು ಪರೀಕ್ಷಾರ್ಥಿಗಳನ್ನು ಹೊರತುಪಡಿಸಿ ಬೇರಾರೂ ನಿಷೇಧಿತ ಪ್ರದೇಶ ಪ್ರವೇಶಿಸುವಂತಿಲ್ಲ. ಪರೀಕ್ಷಾ ಕೇಂದ್ರದ ಹತ್ತಿರದ ಜೆರಾಕ್ಸ್ ಅಂಗಡಿಗಳನ್ನು ಹಾಗು ಸೈಬರ್ ಕೆಫೆಗಳನ್ನು ಮುಚ್ಚಲು ಸಹ ಅವರು ಸೂಚಿಸಿದ್ದಾರೆ.
'ಅನುಭವದ ಕೊರತೆ, ತರಬೇತಿ ಅಗತ್ಯ'
ಸಿಂಧನೂರು: ಜಿಲ್ಲಾ ಕಸಾಪ ಅಧ್ಯಕ್ಷ ಮಹಾಂತೇಶ ಮಸ್ಕಿ ಅವರಿಗೆ ಸಮ್ಮೇಳನ ಸಂಘಟಿಸುವ ಅನುಭವದ ಕೊರತೆ ಇದೆ. ಅವರಿಗೆ ಹಿರಿಯರ ತರಬೇತಿ ಅಗತ್ಯ ಎಂದು ಕಸಾಪ ದತ್ತಿ ಸಲಹಾ ಸಮಿತಿ ಸದಸ್ಯ ರಾಮಚಂದ್ರಪ್ಪ ಲೇವಡಿ ಮಾಡಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಮಸ್ಕಿಯಲ್ಲಿ ನಡೆದಿರುವ 8ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಸರಿಯಾಗಿ ನಿರ್ವಹಣೆ ಮಾಡಿಲ್ಲ. ಹಿರಿಯರಿಂದ ಸರಿಯಾದ ಸಲಹೆ ಸೂಚನೆಗಳನ್ನು ಪಡೆದಿಲ್ಲ. ಇವರಿಗೆ ಸೌಜನ್ಯದ ಕೊರತೆ ಇದೆ. ಸರ್ವಾಧಿಕಾರಿ ಮನೋಭಾವನೆ ಇದೆ. ರಾಯಚೂರು ಜಿಲ್ಲೆ ದಾಸ ಸಾಹಿತ್ಯದ ತೊಟ್ಟಿಲು. ಆದರೆ ದಾಸ ಸಾಹಿತ್ಯದ ಕುರಿತು ಗೋಷ್ಠಿಗಳಿಲ್ಲ. ಕನ್ನಡ ಸಾಹಿತ್ಯಕ್ಕೆ ಮಾಧ್ಯಮದವರ ಕೊಡುಗೆ ಅಪಾರ. ಆದರೆ ಮಾಧ್ಯಮದವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಚರ್ಚಾಗೋಷ್ಠಿಯಲ್ಲಿ ಅವಕಾಶ ಕಲ್ಪಿಸಿಲ್ಲ. ಗಣನೀಯ ಸೇವೆ ಸಲ್ಲಿಸಿದ ಪತ್ರಕರ್ತರನ್ನು ಸನ್ಮಾನಕ್ಕೆ ಆಹ್ವಾನಿಸಿಲ್ಲ. ರಾಜ್ಯ ಪರಿಷತ್ತಿನ ದತ್ತಿ ಸಲಹಾ ಸಮಿತಿ ಸದಸ್ಯರಾದ ತಮ್ಮನ್ನು ಕಡೆಗಣಿಸಿರುವುದು ಇವರ ನಿರ್ಲಕ್ಷ್ಯ ಧೋರಣೆಗೆ ಸಾಕ್ಷಿ ಎಂದು ಕಿಡಿಕಾರಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement