ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕ್ಷೇತ್ರದ ಅಭಿವೃದ್ಧಿಯಲ್ಲಿ ತಾರತಮ್ಯವಿಲ್ಲ: ಶಾಸಕ

Rashmi Kasaragodu
Updated On : 14 Feb 2014, 12:08 pm

ದೇವದುರ್ಗ: ತಾಲೂಕಿನ ಅಭಿವೃದ್ಧಿ ವಿಷಯದಲ್ಲಿ ತಾರತಮ್ಯ ಮಾಡುವುದಿಲ್ಲ. ಹಾಗೆಯೇ ತಾವು ಜನತೆಗೆ ಸುಳ್ಳು ಆಶ್ವಾಸನೆಗಳನ್ನೂ ನೀಡುವುದಿಲ್ಲ ಎಂದು ಶಾಸಕ ಎ. ವೆಂಕಟೇಶ ನಾಯಕ ಹೇಳಿದರು.
ಈಚೆಗೆ ತಾಲೂಕಿನ ಹೇಮನೂರು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಟಿಎಸ್ಪಿ ಅನುದಾನದಲ್ಲಿ 20 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ, ಸರ್ಕಾರದಲ್ಲಿ ಹಣಕಾಸಿನ ಕೊರತೆಯಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ತಾರತಮ್ಯ ಮಾಡುವುದಿಲ್ಲ. ಪ್ರತಿ ಹಳ್ಳಿಯ ಅಭಿವೃದ್ಧಿಗೆ ದುಡಿಯುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ದೇವದುರ್ಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮನಗೌಡ ನಾಗಡದಿನ್ನಿ, ಹೇಮನೂರು ಗ್ರಾಪಂ ಸದಸ್ಯ ಅಮರೇಶ ನಾಯಕ ಮಾತನಾಡಿದರು. ಅರಕೇರಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸ್ಸಯ್ಯ ಶಾಖೆ, ಪಕ್ಷದ ಹಿರಿಯ ಮುಖಂಡ ಹುಸೇನಸಾಬ್ ನೀಲವಂಜಿ, ಸೂಗೂರಡ್ಡೆಪ್ಪಗೌಡ, ಗಂಗಪ್ಪಯ್ಯ ಪೂಜಾರಿ, ನಾಗಪ್ಪ ಬೇರಿ, ಗ್ರಾಪಂ ಸದಸ್ಯ ನಾಗರಾಜ್, ಭೀಮನಗೌಡ ಮೇಟಿ, ಮುದರಂಗಪ್ಪ ಶಾಖೆ, ತಿಪ್ಪಣ್ಣ ಯಲ್ಲದೊಡ್ಡಿ, ಶರಣಪ್ಪ, ಪ್ರಭಯ್ಯ, ದೇವೇಂದ್ರ ನಾಯಕ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement