ಸೌಹಾರ್ದ ಸಹಕಾರಿ ಬ್ಯಾಂಕಿನ ಪ್ರಥಮ ವಾರ್ಷಿಕೋತ್ಸವ
ಸಿಂಧನೂರು: ನಗರದ ಖದಿರಿಯಾ ಕಾಲೋನಿಯಲ್ಲಿರುವ ಶಿವಯೋಗಿ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕಿನ ಪ್ರಥಮ ವಾರ್ಷಿಕೋತ್ಸವವು ಗುರುವಾರ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಎಸ್. ವೀರೇಶಪ್ಪ ಮಾತನಾಡಿ, ಗ್ರಾಹಕರ ಉತ್ತಮ ಸೇವೆ ಒದಗಿಸುವುದರ ಮೂಲಕ ಬ್ಯಾಂಕ್ ಕೆಲಸ ಮಾಡುತ್ತಿದೆ. ಮುಂದಿನ ದಿನಮಾನಗಳಲ್ಲಿ ಎಲ್ಲರ ಸಲಹೆ ಸೂಚನೆಗಳ ಮೇರೆಗೆ ಇನ್ನು ಹೆಚ್ಚಿನ ಬ್ಯಾಂಕಿಗೆ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ರೈತ ಮುಖಂಡ ಹನುಮನಗೌಡ ಬೆಳಗುರ್ಕಿ, ಬಸವೇಶ್ವರ ಬ್ಯಾಂಕಿನ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಮಾಡಶಿರವಾರ, ನಿವೃತ್ತ ಶಿಕ್ಷಕ ಶಿವಣ್ಣ ಹ.ಸಣ್ಣಪ್ಪನವರು, ಬ್ಯಾಂಕಿನ ಉಪಾಧ್ಯಕ್ಷ ಎಚ್. ಬಸವರಾಜ ವಕೀಲರು, ಸದಸ್ಯರಾದ ಟಿ.ವೀರಭದ್ರಪ್ಪ, ಬಸನಗೌಡ ವಕೀಲ, ಶಾಂತಪ್ಪ ಚಿಂಚರಕಿ, ಕರೇಗೌಡ ಕುರಂಕುಂದಿ, ತಿಮ್ಮಾರೆಡ್ಡಿ, ನಾಗರಾಜ ಕಡಬೂರು, ಪುಟ್ಟಸ್ವಾಮಿ, ಸಿಬ್ಬಂದಿ ಶರಣಪ್ಪ, ಪ್ರಸಾದ, ಸಂತೋಷ ಕುಮಾರ, ಈಶ್ವರ ಪಲ್ಲೇದ್, ಗೋವಿಂದರೆಡ್ಡಿ, ಸುಧಾಕರ ಇದ್ದರು.
ಮದ್ಯ- ಮಾಂಸ ತ್ಯಜಿಸಲು ಸಂತ ಮಹಾರಾಜ್ಜೀ ಕರೆ
ಲಿಂಗಸ್ಗೂರು: ಮಾನವನ ಶರೀರ ಭಗವಂತನ ನಾಮ ಸ್ಮರಣೆಗಾಗಿ ಜನ್ಮ ತಾಳಿದ್ದು, ಎಲ್ಲರೂ ಮದ್ಯ, ಮಾಂಸ ತ್ಯಜಿಸಿ ಶಾಖಾಹಾರಿಗಳಾಗಬೇಕೆಂದು ಪರಮ ಸಂತ ಬಾಬಾ ಜಯಗುರುದೇವಜಿ ಮಹಾರಾಜರ ಆಧ್ಯಾತ್ಮಿಕ ಉತ್ತರಾಧಿಕಾರಿ ಸಂತ ಉಮಾಕಾಂತಜೀ ಮಹಾರಾಜ್ ಹೇಳಿದರು. ಮಧ್ಯಪ್ರದೇಶದ ಉಜ್ಜಯಿನಿಯ ಬಾಬಾ ಗುರುದೇವ ಆಶ್ರಮದಿಂದ ದಕ್ಷಿಣ ಭಾರತ ಕಾಫಿಲಾ ಯಾತ್ರೆ-2014 ಆರಂಭಿಸಿದ ಬಾಬಾ, ಮಾರ್ಗಮಧ್ಯೆ ಗುರುವಾರ ಪಟ್ಟಣದ ಶಾದಿಮಹಲ್ ಬಳಿಯ ಮೈದಾನದಲ್ಲಿ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದರು.