ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಜಿ.ವಿ. ಶರ್ಮಾ 2ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ

Vishwanath S
Updated On : 15 Feb 2014, 1:06 am

ಸಿಂಧನೂರು: ತಾಲೂಕಿನ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಹಿರಿಯ ಸಾಹಿತಿ ಜಿ.ವಿ. ಶರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಶ್ರೀಶೈಲ್ ಕೌದಿ ಹಾಗೂ ವೀರೇಶ ಗೋನವಾರ ತಿಳಿಸಿದ್ದಾರೆ.
ಕಸಾಪ ತಾಲೂಕಾಧ್ಯಕ್ಷೆ ರಮಾದೇವಿ ಶಂಭೋಜಿ ಅಧ್ಯಕ್ಷತೆಯಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಜಿ.ವಿ. ಶರ್ಮಾ ಅವರನ್ನು ಮನೆಗೆ ತೆರಳಿ ಅಧಿಕೃತ ಆಮಂತ್ರಣ ನೀಡಿ ಗೌರವಿಸಲಾಯಿತು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಎಸ್.ದೇವೇಂದ್ರಗೌಡ, ಗೌರವ ಕೋಶಾಧ್ಯಕ್ಷ ಆರ್.ಸಿ. ಪಾಟೀಲ್, ಗೌರವ ಸಲಹೆಗಾರರಾದ ನರಸಿಂಹಪ್ಪ, ವೈ.ನರೇಂದ್ರನಾಥ, ಎಚ್.ಜಿ. ಹಂಪಣ್ಣ, ಡಿ.ಎಚ್. ಕಂಬಳಿ, ವೈ.ನರೇಂದ್ರನಾಥ ಕಾರ್ಯಕಾರಿ, ಸಾಹಿತಿ ಬೀರಪ್ಪ ಶಂಭೋಜಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಆರ್.ಅಮರೇಶ ಅಲಬನೂರು, ಪಂಪಯ್ಯಸ್ವಾಮಿ ಸಾಲಿಮಠ, ನಾಗರತ್ನ ಬಂಗಾರಶೆಟ್ಟಿ, ಉಪಸ್ಥಿತರಿದ್ದು ಸಮ್ಮೇಳಾಧ್ಯಕ್ಷರಿಗೆ ಶುಭ ಕೋರಿದರು.
ಹರ್ಷ: ಸಮ್ಮೇಳನದ ಅಧ್ಯಕ್ಷರನ್ನಾಗಿ ಬಹುಭಾಷಾ ಪಂಡಿತ, ಕನ್ನಡ ಸಾಹಿತಿ ಜಿ.ವಿ. ಶರ್ಮಾ ಅವರನ್ನು ಆಯ್ಕೆ ಮಾಡಿರುವುದು ಸಂತೋಷವಾಗಿದೆ ಎಂದು ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ ತಿಳಿಸಿದ್ದಾರೆ.
ನೆರೆಯ ಆಂಧ್ರದಿಂದ ಉದ್ಯೋಗ ಅರಸಿ ಬಂದ ಜಿ.ವಿ. ಶರ್ಮಾ ಕನ್ನಡ ಭಾಷೆಯನ್ನು ಕಲಿತು ಕನ್ನಡಿಗರಾಗಿ ಕನ್ನಡದಲ್ಲಿ 16 ಮೌಲಿಕ ಕೃತಿಗಳನ್ನು ರಚಿಸಿ, ಕನ್ನಡ ಸಾಹಿತ್ಯಕ್ಕೆ ಅನುಪಮ ಸೇವೆ ಸಲ್ಲಿಸಿದ್ದಾರೆ. ಕನ್ನಡ ಪ್ರೀತಿಸಿ, ಇಂದಿಗೂ ನಿರಂತರವಾಗಿ ಬರೆಯುತ್ತಿರುವ ಜಿ.ವಿ. ಶರ್ಮಾ ಕನ್ನಡ, ತೆಲುಗು ಉಭಯ ಭಾಷಾ ಪಂಡಿತ, ಕರ್ನಾಟಕಾಂಧ್ರ ಸಂಸ್ಕೃತಿಯ ಆರಾಧಕರಾಗಿರುವ ವಿಶಿಷ್ಟ ವ್ಯಕ್ತಿತ್ವ ಹೊಂದಿದ್ದಾರೆ. ಆಯ್ಕೆ ಯೋಗ್ಯ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement