ಸಂಸದರ ಅನುದಾನದಲ್ಲಿ 31 ಲಕ್ಷ ಮಂಜೂರು
ಲಿಂಗಸ್ಗೂರು: ರಾಯಚೂರು ಲೋಕಸಭಾ ಕ್ಷೇತ್ರದ ಸಂಸದ ಸಣ್ಣ ಫಕೀರಪ್ಪ 2012- 13ನೇ ಸಾಲಿಗೆ ಲಿಂಗಸ್ಗೂರು ವಿಧಾನಸಭೆ ಕ್ಷೇತ್ರಕ್ಕೆ 31 ಲಕ್ಷ ಅನುದಾನ ಮಂಜೂರು ಮಾಡಿದ್ದಾರೆ. ಪ್ರದೇಶಾಭಿವೃದ್ಧಿ ಯೋಡನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಮಂಜೂರು ಮಾಡಿದ್ದು, ಅದೇ ರೀತಿ ಜಿಲ್ಲೆಯ ದೇವದುರ್ಗ ಹಾಗೂ ಮಾನವಿ ಕ್ಷೇತ್ರಗಳಿಗೆ ತಲಾ 30 ಲಕ್ಷ ಸೇರಿದಂತೆ ಒಟ್ಟು 61 ಲಕ್ಷ ಬಿಡುಗಡೆ ಮಾಡಿರುವುದಾಗಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಲಿಂಗಸ್ಗೂರು ವಿಧಾನಸಭೆ ಕ್ಷೇತ್ರಕ್ಕೆ ಪಂಚಾಯತ್‌ರಾಜ್ ಎಂಜಿನಿಯರಿಂಗ್ ಉಪವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಿಗೆ ಕಾಮಗಾರಿ ಅನುಷ್ಠಾನಾಧಿಕಾರಿಗಳನ್ನಾಗಿ ಅಧಿಕಾರ ವಹಿಸಿದ್ದಾರೆ.
ಕಾಮಗಾರಿ ವಿವರ: ಲಿಂಗಸ್ಗೂರು ಪಟ್ಟಣದಲ್ಲಿ ತಾಲೂಕು ಬ್ರಾಹ್ಮಣ ಸಂಘದ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ 5 ಲಕ್ಷ, ತಾಲೂಕಿನ ಆಮದಿಹಾಳ ಗ್ರಾಮದ ವಿಶ್ವ ಭಾರತಿ ಫ್ರೌಢ ಶಿಕ್ಷಣ ಶಾಲೆ ಕೊಠಡಿ ನಿರ್ಮಾಣಕ್ಕೆ 4.50 ಲಕ್ಷ, ಐದನಾಳ ಗ್ರಾಮದ ಸ್ವಾಮಿ ವಿವೇಕಾನಂದ ಶಾಲಾ ಕೊಠಡಿಗೆ 5 ಲಕ್ಷ, ಗುರುಗುಂಟಾ ಗ್ರಾಮದ ಬಳಿಯ ವಿತರಣಾ ನಾಲೆಯಿಂದ ಲಿಂಗಪ್ಪ ಉಳ್ಳಾಗಡ್ಡಿ ದೊಡ್ಡಿಯವರೆಗೆ ರಸ್ತೆ ನಿರ್ಮಿಸಲು 4 ಲಕ್ಷ, ಗುರುಗುಂಟಾ ಗ್ರಾಮದ ಸಂತೆ ಬಜಾರದಿಂದ ಬೀರಪ್ಪ ದೇವಸ್ಥಾನದವರೆಗೆ ಸಿಸಿ ರಸ್ತೆ ನಿರ್ಮಿಸಲು 4 ಲಕ್ಷ, ಗುರುಗುಂಟಾ ಗ್ರಾಮದ ಮೌಂಟ್ ಕರ್ನಲ್ ಶಾಲೆಯ ಎಡಭಾಗಕ್ಕೆ ಕಾಂಪೌಂಡ್ ನಿರ್ಮಿಸಲು 4 ಲಕ್ಷ, ಗುರುಗುಂಟಾ ಬಡಕಪ್ಪ ದೇವಸ್ಥಾನದಿಂದ ಮೌಂಟ್ ಕರ್ನಲ್ ಶಾಲೆವರೆಗೆ ಸಿಸಿ ರಸ್ತೆ ನಿರ್ಮಿಸಲು 4 ಲಕ್ಷ ಮಂಜೂರು ಮಾಡಲಾಗಿದ್ದು, ಕಾಮಗಾರಿ ಅಂದಾಜು ಪತ್ರಿಕೆ ತಯಾರಿಸಿ ಆಡಳಿತಾತ್ಮಕ ಮಂಜೂರಾತಿ ಪಡೆಯಲು ಸೂಚಿಸಲಾಗಿದೆ.