ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕನ್ನಡ ಸಾಹಿತ್ಯಕ್ಕೆ ಕನಕದಾಸರ ಕೊಡುಗೆ ಅಮೂಲ್ಯ: ಶೀಲಾದಾಸ್

Mainashree
Updated On : 17 Feb 2014, 11:03 am

ರಾಯಚೂರು: ನಗರದ ಎಲ್‌ವಿಡಿ ಕಾಲೇಜು, ಬೆಂಗಳೂರಿನ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು ಇವರ ಆಶ್ರಯದಲ್ಲಿ ಇತ್ತೀಚೆಗೆ “ÈÚßß}Úß¡ ಬಂದಿದೆ OæÞÂVæ’ ಎಂಬ ಮಾಲಿಕೆಯ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕನಕದಾಸರ ಜೀವನ-ಸಾಹಿತ್ಯದ ಕುರಿತು ಮಾತನಾಡಿದ ಉಪನ್ಯಾಸಕಿ ಡಾ. ಶೀಲಾದಾಸ್ ಅವರು, ಸಂತ ಕವಿ ಕನಕದಾಸರು ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕಾಣಿಕೆ ನೀಡಿದ್ದಾರೆ. ಕೀರ್ತನೆ-ಮುಂಡಿಗೆ ಮೋಹನ ತರಂಗಿಣಿ, ನಳಚರಿತೆ, ರಾಮಧಾನ್ಯ ಚರಿತೆ, ಹರಿಭಕ್ತಿ ಸಾರದಂತಹ ಕೃತಿಗಳ ಮೂಲಕ ಲೋಕ ನೀತಿ-ಸಮಬಾಳು, ಸಮನ್ವಯತೆಯ ಮಹತ್ವ, ಮಾನವ ಜೀವನದ ಸಾರ್ಥಕತೆ, ಭಕ್ತಿಯ ಸ್ವರೂಪದ ಕುರಿತು ಮಾರ್ಗದರ್ಶನ ಮಾಡಿದ್ದಾರೆಂದರು.
ಕನಕದಾಸರು ದಂಡನಾಯಕನಾಗಿ, ಕವಿಯಾಗಿ-ಹರಿದಾಸನಾಗಿ ಭಾಷಾ ಪ್ರವೀಣನಾಗಿ, ಸಮಾಜ ಸುಧಾರಕನಾಗಿ ವೈವಿಧ್ಯಮಯ ವ್ಯಕ್ತಿತ್ವ ರೂಢಿಸಿಕೊಂಡು ಆದರ್ಶಪ್ರಾಯರಾಗಿದ್ದರು ಎಂದರು.
ಕಾಲೇಜಿನ ಪ್ರಾಚಾರ್ಯ ಡಾ. ಶರಣಬಸವ ಖೇಣೇದ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಭಾಗದ ಮುಖ್ಯಸ್ಥ ಡಾ. ಬಸವಲಿಂಗ ಸೊಪ್ಪಿಮಠ, ಉಪ ಪ್ರಾಚಾರ್ಯ ಅಮರೇಗೌಡ ಮತ್ತಿತರರಿದ್ದರು. ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement