ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಿರುಪಯುಕ್ತ ದೋಭಿಘಾಟ್

Mainashree
Updated On : 17 Feb 2014, 11:03 am

ಮುದಗಲ್: ಪಟ್ಟಣದ ಸಮೀಪದ ಜನತಾಪೂರ ಗ್ರಾಮದ ಹೊರವಲಯದಲ್ಲಿ ನಿರ್ಮಿಸಲಾದ ಧೋಭಿಘಾಟ್ ನಿರ್ವಹಣೆ ಕೊರತೆಯಿಂದ ವ್ಯರ್ಥವಾಗಿ ಬಿದ್ದಿದೆ.
ದೋಭಿಘಾಟ್ ಸುತ್ತಮುತ್ತ ಜಾಲಿಗಿಡಗಳು ಬೆಳೆದು ನಿಂತಿದ್ದು, ಸಾರ್ವಜನಿಕರ ಉಪಯೋಗಕ್ಕೆ ಭಾರದಂತಾಗಿದೆ. ದೋಭಿಘಾಟ್ ಹಾಗೂ ನೀರಿನ ಗುಮ್ಮಿಗೆ ನಿರ್ಮಾಣವಾದಾಗಿನಿಂದ ಹನಿ ನೀರೂ ಸರಬರಾಜಾಗಿಲ್ಲ. ಇದರಿಂದ ಗ್ರಾಮದ ಮಹಿಳೆಯರಿಗೆ ಬಟ್ಟೆ ತೊಳೆಯಲು, ನಿತ್ಯ ಬಳಕೆ ಮಾಡಲು ನೀರಿನ ತೊಂದರೆ ಆಗುತ್ತಿದೆ. ಜಾನುವಾರುಗಳಿಗೂ ಕುಡಿಯಲು ನೀರಿನ ಬರ ಬಂದಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಗ್ರಾಪಂಗೆ ಅನೇಕ ಸಲ ಮನವಿ ಮಾಡಿದರೂ ಕ್ಯಾರೇ ಎನ್ನುತ್ತಿಲ್ಲ. ಕೂಡಲೇ ಗ್ರಾ.ಪಂ. ಆಡಳಿತ ವರ್ಗದವರು ನಿರುಪಯುಕ್ತವಾಗಿರುವ ದೋಭಿಘಾಟ್ ಸ್ವಚ್ಚಗೊಳಿಸಿ ಸಾರ್ವಜನಿಕ ಬಳಕೆಗೆ ಅವರ್ಕಾಶ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement