ಮನೆಯಲ್ಲಿ ಮಹಾಮನೆ
ರಾಯಚೂರು: ನಗರದ ಆಶಾಪುರ ವೆಂಕಣ್ಣ ಅವರ ಜ್ಯೋತಿ ಕಾಲೋನಿಯ ಮನೆಯಲ್ಲಿ ಇತ್ತೀಚೆಗೆ ಬಸವ ಕೇಂದ್ರದಿಂದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಲಲಿತಾ ಡಾ. ಬಸನಗೌಡ ಅವರು ಜಾತಿ, ಅಧಿಕಾರ, ಅಂಧಶ್ರದ್ಧೆಯಿಂದಾಗಿ ಮಾನಸಿಕ ನೆಮ್ಮದಿ ಹಾಳಾಗುತ್ತಿದೆ. ವಿಶ್ವಭ್ರಾತೃತ್ವದ ಅಂಶ ಹೊಂದಿರುವ ಶರಣರ ವಚನಗಳಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಹೇಳಿದರು.
ಮಹಾದೇವಿ ಮಠಪತಿ ಮಾತನಾಡಿ, ಶರಣರು ಕಂಡುಂಡ ಸತ್ಯವನ್ನೇ ತಮ್ಮ ವಚನಗಳಲ್ಲಿ ದಾಖಲಿಸಿದ್ದಾರೆ. ಮಕ್ಕಳಿಗೆ ಶರಣರ ಚಿಂತನೆಗಳ ಮೂಲಕ ಉತ್ತಮ ಸಂಸ್ಕಾರ ನೀಡುವಂತೆ ಸಲಹೆ ನೀಡಿದರು. ರಾಮಸ್ವಾಮಿ ನುಲಿ, ಮಲ್ಲನಗೌಡ ಅಸ್ಕಿಹಾಳ ಮಾತನಾಡಿದರು. ಗುರುಪ್ರಸಾದ್ ವಚನ ಗಾಯನ ಮಾಡಿದರು. ಸಿದ್ದಣ್ಣ ನೆಲೋಗಿ, ಕಲ್ಯಾಣೇಶ್ವರಿ, ಸಿ.ಬಿ. ಪಾಟೀಲ್, ಚನ್ನಬಸವಣ್ಣ ಮಹಾಜನಶೆಟ್ಟಿ, ವೀರೇಶ್ ಅಂಗಡಿ ಇದ್ದರು.