ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವಿದ್ಯಾರ್ಥಿಗಳಲ್ಲಿ ಕೀಳರಿಮೆ ಬೇಡ

Mainashree
Updated On : 17 Feb 2014, 11:03 am

ಸಿಂಧನೂರು: ಸಾಧನೆಯ ಹಾದಿಯಲ್ಲಿ ಚಲಿಸಬೇಕಾದರೆ ಸ್ವಾಭಿಮಾನ ಮುಖ್ಯ. ಹಾಗೆಯೇ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಹತಾಶರಾಗದೆ, ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತಾ ಕೀಳರಿಮೆ ಬೆಳೆಸಿಕೊಳ್ಳಬಾರದು ಎಂದು ಲಿಂಗಸ್ಗೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶರಣಬಸವ ಸಲಹೆ ನೀಡಿದರು.
ನಗರದ ಅನಿಕೇತನ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ವಿಶೇಷ ಉಪನ್ಯಾಸಕರಾಗಿ ಅವರು ಮಾತನಾಡಿದರು.
ಅನ್ಯೋನ್ಯತೆ ಇರಲಿ: ಗುರುಗಳು ಶಿಷ್ಯರನ್ನು ಪರೀಕ್ಷಿಸಬಹುದು, ಶಿಷ್ಯರು ಗುರುಗಳನ್ನು ಪರೀಕ್ಷಿಸಬಹುದು. ಆ ಮೂಲಕ ಬಾಂಧವ್ಯ ವೃದ್ಧಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದ ಅವರು, ಗೌತಮಬುದ್ಧ- ಆನಂದ, ರಾಮಕೃಷ್ಣ ಪರಮಹಂಸ- ಸ್ವಾಮಿ ವಿವೇಕಾನಂದ ಅವರ ಅನ್ಯೋನ್ಯತೆಯನ್ನು ವಿವರಿಸಿದರು.  ಜವಳಗೇರಾ ಸರ್ಕಾರಿ ಪಪೂ ಕಾಲೇಜು ಪ್ರಾಚಾರ್ಯ ಎಸ್.ಶಿವರಾಜ ವಿದ್ಯಾರ್ಥಿ ಯುವಜನರು ಕೆಡಕಿಗಿಂತ ಒಳಿತಿನ ಮಾದರಿಗಳನ್ನು ಆದರ್ಶವಾಗಿಟ್ಟುಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಸೀಲ್ದಾರ್ ವೆಂಕನಗೌಡ ಪಾಟೀಲ್, ಅತ್ಯಂತ ಕಡಿಮೆ ಅವಧಿಯಲ್ಲಿ ಉತ್ತಮ ಸಾಧನೆ ಮಾಡಿದ ಅನಿಕೇತನ ಕಾಲೇಜಿನ ಕಾರ್ಯವೈಖರಿಯನ್ನು ಪ್ರಶಂಸಿಸಿದರು.
ಕಠಿಣ ಪರಿಶ್ರಮದಿಂದ ಸಾಧಿಸಿ: ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಡಿ.ಎಚ್. ಕಂಬಳಿ, ವರ್ಷವಿಡೀ ಅಭ್ಯಾಸ ಮಾಡದಿದ್ದರೂ ಚಿಂತೆಯಿಲ್ಲ, ಒಂದು ತಿಂಗಳ ಅವಧಿಯಲ್ಲಾದರೂ ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿದರೆ ಉತ್ತಮ ಸಾಧನೆ ಅಸಾಧ್ಯವಾದುದಲ್ಲ ಎಂದು ಅಭಿಪ್ರಾಯಪಟ್ಟರು.
ಪ್ರಾಚಾರ್ಯ ವೈ.ಎಚ್. ರಕ್ಕಸಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಹನುಮೇಶ, ಚಿದಾನಂದ, ವಿದ್ಯಾರ್ಥಿಗಳಾದ ಮುತ್ತಣ್ಣ, ಯಮನೂರ ಅನಿಸಿಕೆ ವ್ಯಕ್ತಪಡಿಸಿದರು.
ಜಿಪಂ ಸದಸ್ಯ ಚಂದುಸಾಬ ಮುಳ್ಳೂರು, ನಗರಸಭೆ ಅಧ್ಯಕ್ಷ ಸೈಯದ್ ಜಾಫರ್ ಅಲಿ ಜಾಗೀರದಾರ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ನಗರಸಭೆ ಸದಸ್ಯರಾದ ಪ್ರಭುರಾಜ, ಅನಿತಾ, ಚಿದಾನಂದಪ್ಪ ಉಪಸ್ಥಿತರಿದ್ದರು. ಈರಮ್ಮ ಪ್ರಾರ್ಥಿಸಿದರು. ಬೇಬಿ ಸ್ವಾಗತಿಸಿದರು. ಉಪನ್ಯಾಸಕರಾದ ತಿಮ್ಮಣ್ಣ-ಬಸವರಾಜ ನಿರೂಪಿಸಿದರು. ಶಿಕ್ಷಣಶಾಸ್ತ್ರ ಉಪನ್ಯಾಸಕ ಅಯ್ಯಣ್ಣ ವಂದಿಸಿದರು.
ಸನ್ಮಾನ: ಲಿಂಗಸ್ಗೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶರಣಬಸವ ಅರಕೇರಾ, 2013- 14ನೇ ಸಾಲಿನ ಕ್ರೀಡಾಕೂಟದಲ್ಲಿ ರಾಜ್ಯಮಟ್ಟದ ಪಪೂ ಕಾಲೇಜು ಕಬಡ್ಡಿ ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿದ್ಯಾರ್ಥಿ ಜಯರಾಂ, ತಂಡದ ತರಬೇತುದಾರ ಚಂದ್ರಶೇಖರ ಯರದಿಹಾಳ, ವ್ಯವಸ್ಥಾಪಕ ತಿಮ್ಮಣ್ಣ ರಾಮತ್ನಾಳ, ಸರ್ಕಾರಿ ಪಪೂ ಕಾಲೇಜಿಗೆ ನೇಮಕಗೊಂಡ ರಂಗನಾಥ ಬುದ್ದಿನ್ನಿ, ಅವರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement