ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಮಾಜ ಬೆಳವಣಿಗೆಯೇ ಧರ್ಮಗಳ ಗುರಿ

Mainashree
Updated On : 18 Feb 2014, 11:57 am

ಕೆಂಭಾವಿ: ಸತ್ಯ ಶುದ್ಧತ್ವದ ತಳಹದಿಯ ಮೇಲೆ ಸಮಾಜವನ್ನು ಬೆಳೆಸುವುದೇ ಎಲ್ಲ ಧರ್ಮಗಳ ಗುರಿ, ಧರ್ಮದ ದಿಕ್ಸೂಚಿ ಎಲ್ಲರ ಬಾಳಿಗೆ ಬೆಳಕನ್ನುಂಟು ಮಾಡುತ್ತದೆ ಎಂದು ಶಾಂತ ರುದ್ರಮುನಿ ಸ್ವಾಮಿ ಅವರು  ಹೇಳಿದರು.
 ಸಮೀಪದ ಕರಡಕಲ್ ಗ್ರಾಮದ ಕೋರಿಸಿದ್ದೇಶ್ವರ ಶಾಖಾ ಮಠದಲ್ಲಿ ನಡೆದ 160ನೇ ಶಿವಾನುಭವ ಗೋಷ್ಠಿಯ ಸಾನಿಧ್ಯ ವಹಿಸಿ ಮಾತನಾಡಿ, ಸಮಾಜದಲ್ಲಿ ಶಾಂತಿ ನೆಲೆಸಬೇಕಾದರೆ ಮಠ- ಮಂದಿರಗಳಲ್ಲಿ ನಡೆಯುವ ಸತ್ಸಂಗದಲ್ಲಿ ಪಾಲ್ಗೊಳ್ಳಬೇಕೆಂದರು.
ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ, ಕೂಡಲಗಿ ಬಾಬಾ ಮಹಾರಾಜ ಮಠದ ಗಣಪತಿ ಮಹಾರಾಜ, ಮಠ-ಮಂದಿರಗಳು ನೆಮ್ಮದಿಯ ತಾಣಗಳಾಗಬೇಕು ಎಂದರು. ಮುದ್ನೂರ ಗ್ರಾಮದ ಕಂಠಿಹನುಮಾನ ದೇವಸ್ಥಾನದ ಮಲ್ಲಿಕಾರ್ಜುನ ದೇವರು ನೇತೃತ್ವ ವಹಿಸಿದ್ದರು, ತಾಪಂ ಸದಸ್ಯೆ ಕೃಷ್ಣಮ್ಮ ಬಡಿಗೇರ ಉದ್ಘಾಟಿಸಿದರು, ಮುಖಂಡರಾದ ಈಶ್ವರ ಬಡಿಗೇರ, ವೆಂಕಟರೆಡ್ಡಿ ರಾಯಚೂರ, ಡಾ. ಎಸ್.ಎಂ. ವದಗಿ, ಮಲ್ಲಿಕಾರ್ಜುನ ಯಡಹಳ್ಳಿ, ಯಂಕಣ್ಣ ಶರಣರು, ಮನೋಹರ ಸಿಂದಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಿವಪ್ರಕಾಶ ನಿರೂಪಿಸಿ ವಂದಿಸಿದರು. ಇದೇ ಸಂದರ್ಭದಲ್ಲಿ ಶಾಂತಗೌಡ ಮಾಲಿಪಾಟೀಲ, ಸಿದ್ದರಾಜ ರಾಜಾಪುರ, ಶಾಂತಪ್ಪ ಏವೂರ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement