ಅಂಚೆ ನೌಕರರ ಅನಿರ್ದಿಷ್ಟಾವಧಿ ಧರಣಿ
ಕ.ಪ್ರ. ವಾರ್ತೆ , ಲಿಂಗಸ್ಗೂರು , ಫೆ.19
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮೀಣ ಅಂಚೆ ನೌಕರರು ಪಟ್ಟಣದ ಅಂಚೆ ಕಚೇರಿ ಆವರಣದಲ್ಲಿ ಗುರುವಾರ ಅನಿರ್ದಿಷ್ಟ ಧರಣಿ ನಡೆಸಿದರು.
ಗ್ರಾಮೀಣ ಅಂಚೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಹಾದೇವಯ್ಯ ಅವರ ಆದೇಶದಂತೆ ಧರಣಿ ನಡೆಸಿದ ನೌಕರರು, ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ನೀಡುವ ಎಲ್ಲ ಸೌಲಭ್ಯ ಗ್ರಾಮೀಣ ಅಂಚೆ ನೌಕರರಿಗೆ ಒದಗಿಸಬೇಕು. ಅನುಕಂಪದ ಆಧಾರದ ಮೇಲೆ ನೌಕರಿ ನೀಡಬೇಕು. ಶೇ.25ರಷ್ಟು ಹೊರಗಿನ ನೌಕರರ ಭರ್ತಿ ತಡೆ ಹಿಡಿದು ಪೋಸ್ಟ್ಮನ್ ಮತ್ತು ಎಂಟಿಎಸ್ ಹುದ್ದೆ ಹಿರಿಯ ಜಿ. ಜಗನ್ನಾಥ ಡಿ.ಎಸ್. ಜೇಷ್ಠತೆ ಆಧರಿಸಿ ನೇಮಕಾತಿ ಮಾಡಬೇಕು. ಮೂಲ ವೇತನದ ಶೇ.50 ರಷ್ಟು ಭತ್ಯೆ ನೀಡಬೇಕು. ತಾತ್ಕಾಲಿಕ ದಿನಗೂಲಿ ನೌಕರರನ್ನು ಕಾಯಂಗೊಳಿಸಬೇಕೆಂದು ಒತ್ತಾಯಿಸಿದರು.
ಧರಣಿಯಲ್ಲಿ ಗ್ರಾಮೀಣ ಅಂಚೆ ನೌಕರರ ಸಂಘದ ಗೌರವಾಧ್ಯಕ್ಷ ಬಸವರಾಜಸ್ವಾಮಿ, ಜಗನ್ನಾಥ ದಂಡಿನ ಹಟ್ಟಿ, ಪಿ. ವೆಂಕಟೇಶ ಬಾಗಲವಾಡ, ಲಕ್ಷ್ಮೀ, ಹನುಮಂತಪ್ಪ ನಾಗರಹಾಳ, ರುದ್ರಯ್ಯಸ್ವಾಮಿ, ಸಂಗಯ್ಯ ಯರಡೋಣ, ಶಂಕ್ರಪ್ಪ ನವಲಿ, ದತ್ತಾತ್ರೇಯ ಹಲ್ಕಾವಟಿಗಿ, ಶಿವನಗೌಡ ಲೆಕ್ಕಿಹಾಳ, ಪ್ರದೀಪ ಕುಮಾರ ರೌಡಲಬಂಡಾ(ತ), ದುರುಗಪ್ಪ ಅಂಕುಶದೊಡ್ಡಿ, ಈರಪ್ಪ ವಂದ್ಲಿ, ಶಿವಲಿಂಗಪ್ಪ ಹೊನ್ನಳ್ಳಿ ಸೇರಿದಂತೆ ಇದ್ದರು.
ನೌಕರರ ಮುಷ್ಕರ 2ನೇ ದಿನಕ್ಕೆಸಿಂಧನೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ ರಾಯಚೂರು ವಿಭಾಗ ಘಟಕದಿಂದ ರಾಷ್ಟ್ರೀಯ ಘಟಕ ಕರೆಯ ಹಿನ್ನೆಲೆಯಲ್ಲಿ ನಗರದ ಕೇಂದ್ರ ಅಂಚೆ ಕಚೇರಿ ಕಾರ್ಯಾಲಯದ ಮುಂಭಾಗದಲ್ಲಿ ನಡೆಸುತ್ತಿರುವ ಮುಷ್ಕರ ಬುಧವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಗ್ರಾಮೀಣ ಅಂಚೆ ನೌಕರರು ಮಳೆ, ಚಳಿ, ಬಿಸಿಲೆನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದು, ವೇತನ ತಾರತಮ್ಯದಿಂದಾಗಿ ಜೀವನ ನಿರ್ವಹಣೆಗೆ ತೊಂದರೆಯಾಗಿದೆ. ಕೇಂದ್ರ ಸರ್ಕಾರ ನೌಕರರ ಬಗ್ಗೆ ನಿಷ್ಕಾಳಜಿ ವಹಿಸದೇ ಸಂವಿಧಾನಬದ್ಧವಾಗಿ ದೊರೆಯುವ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಧರಣಿ ನಿರತರು ಒತ್ತಾಯಿಸಿದರು.
ಮುಷ್ಕರದಲ್ಲಿ ವಿಭಾಗೀಯ ಘಟಕ ಅಧ್ಯಕ್ಷ ಸೋಮಶೇಖರಗೌಡ, ಮಲ್ಲಿಕಾರ್ಜುನ ಹೆಡಗಿನಾಳ, ಪಾಲಾಕ್ಷಯ್ಯಸ್ವಾಮಿ, ಬಸವರಾಜ, ಮಲ್ಲಯ್ಯ ನಾಯಕ, ಶಿವಾನಂದಪ್ಪ, ಚನ್ನಬಸಪ್ಪ, ಪ್ರಭುಕಾಂತರೆಡ್ಡಿ, ವೆಂಕಟೇಶ ಜವಳಗೇರಿ, ಮೋಹನದಾಸ, ರಾಘವೇಂದ್ರ ಪಿಡಬ್ಲ್ಯೂಡಿ ಕ್ಯಾಂಪ್, ವಸಂತ ಕುಷ್ಟಗಿ, ನಜೀರಸಾಬ ಇನ್ನಿತರರು ಇದ್ದರು.