ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಯಲ್ಲಮ್ಮದೇವಿ ರಥೋತ್ಸವ

Lingaraj Badiger
Updated On : 21 Feb 2014, 11:46 am

ರಾಯಚೂರು: ಮಾನವಿ ತಾಲೂಕಿನ ನೀರಮಾನ್ವಿ ಗ್ರಾಮದ ಐತಿಹಾಸಿಕ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವದ ರಥೋತ್ಸವ ಬುಧವಾರ ಸಂಜೆ ಅದ್ಧೂರಿಯಾಗಿ ನಡೆಯಿತು. ವಿವಿಧೆಡೆಯಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಬೆಳಗ್ಗೆ ಗ್ರಾಮದ ಯಲ್ಲಮ್ಮದೇವಿಯ ಮನೆಯಿಂದ ರಥದ ಕಳಸವನ್ನು ಭವ್ಯ ಮೆರವಣಿಗೆಯಲ್ಲಿ ತಂದು ರಥೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸಿ ಕಳಾಸರೋಹಣ ನೆರವೇರಿಸಲಾಯಿತು.
ನಂತರ ಸಂಜೆ 5.30ಕ್ಕೆ ರಥೋತ್ಸವಕ್ಕೆ ಶಾಸಕ ಹಂಪಯ್ಯ ನಾಯಕ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ರಥ ಮುಂದೆ ಸಾಗುತ್ತಿದ್ದಂತೆಯೇ ಪಾಲ್ಗೊಂಡಿದ್ದ ಲಕ್ಷಾಂತರ ಭಕ್ತರು ಚಪ್ಪಾಳೆ ತಟ್ಟಿ ದೇವಿಗೆ ಜೈಕಾರ ಹಾಕಿದರು. ಜಾತ್ರಾ ಮಹೋತ್ಸವದಲ್ಲಿ ರಾಯಚೂರು ಶಾಸಕ ಡಾ. ಶಿವರಾಜ್ ಪಾಟೀಲ್, ಮಾನವಿ ಪುರಸಭೆ ಅಧ್ಯಕ್ಷ ಸೈಯದ್ ನಜೀರುದ್ದೀನ್ ಖಾದ್ರಿ, ಜೆಡಿಎಸ್ ಮುಖಂಡ ರಾಜಾ ವೆಂಕಟಪ್ಪ ನಾಯಕ, ಪ್ರಮುಖರಾದ ಬುಡ್ಡುಸಾಬ್, ರಾಮಣ್ಣ, ಜೆ. ನಾಗರಾಜ ನಾಯಕ, ಪಂಪಾಪತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement