2.45 ಲಕ್ಷ ರು. ಬಜೆಟ್ ಮಂಡನೆ
ಕ.ಪ್ರ. ವಾರ್ತೆ , ಲಿಂಗಸ್ಗೂರು , ಫೆ.22
ಸ್ಥಳೀಯ ಪುರಸಭೆ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷ ಕುಮಾರಸ್ವಾಮಿ ಸಾಲ್ಮನಿ 2014- 15ನೇ ಸಾಲಿನಲ್ಲಿ ಎಲ್ಲ ಹಣಕಾಸಿನ ಮೂಲಗಳು ಕ್ರೋಡೀಕರಿಸಿ 2.45 ಲಕ್ಷ ಹೆಚ್ಚುವರಿ ಉಳಿತಾಯ ಬಜೆಜ್ ಮಂಡನೆ ಮಾಡಿದರು.
2014- 15ನೇ ಸಾಲಿನ ರಾಜಸ್ವ ಖಾತೆಗೆ 8,08,85,000 ವರ್ಷದ ಅಂದಾಜು ಜಮಾ ನಿರೀಕ್ಷೆ ಹೊಂದಲಾಗಿದ್ದು, 7,99,14,000 ಅಂದಾಜು ಪಾವತಿ. ಹೆಚ್ಚುವರಿ ನಗದು 17,45,000. ಬಂಡವಾಳ ಖಾತೆಗೆ 67,35,00,000 ವರ್ಷದ ಅಂದಾಜು ಜಮಾ ನಿರೀಕ್ಷೆ ಹೊಂದಲಾಗಿದ್ದು, 67,50,00,000 ಅಂದಾಜು ಪಾವತಿ. ಕೊರತೆ 15,00,000. ಅಸಾಧಾರಣ ಖಾತೆಗೆ 52,09,30,000 ಅಂದಾಜು ಜಮಾ ನಿರೀಕ್ಷೆ. 52,09,30,000 ಅಂದಾಜು ಪಾವತಿ ಸೇರಿದಂತೆ ಅಂತಿಮ ಶುಲ್ಕ 127,50,70,000 ಅಂದಾಜು ಜಮಾ ನಿರೀಕ್ಷೆ ಹೊಂದಲಾಗಿದೆ. 127,48,25,000 ಅಂದಾಜು ಪಾವತಿ(ವ್ಯಯ) ಮಾಡಲು ಅಂದಾಜಿಸಿದ್ದು, ಎಲ್ಲ ಹಣಕಾಸಿನ ಮೂಲಗಳನ್ನು ಕ್ರೂಢೀಕರಿಸಿ 2.45 ಲಕ್ಷ ಹೆಚ್ಚುವರಿ ಆಯವ್ಯಯ ಮಂಡನೆ ಮಾಡಲಾಯಿತು.
ಆಯ-ವ್ಯಯ ವಿವರ..: ಪಟ್ಟಣಕ್ಕೆ ಯುಜಿಡಿ ಪದ್ಧತಿ ಅಳವಡಿಸಲು 65 ಕೋಟಿ ಪ್ರಸ್ತಾವನೆ ಅನುಮೋದನೆ ಹಂತದಲ್ಲಿದೆ. ಕೇಂದ್ರ ಸರ್ಕಾರದಿಂದ ಯುಐಡಿಎಸ್ಎಸ್ಎಂಟಿ 30 ಕೋಟಿ ಅನುದಾನದಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಅನುದಾನದ ಅನುಮೋದನೆಗೆ ಸಲ್ಲಿಸಲಾಗಿದೆ. ಎಚ್ಕೆಡಿಬಿ ಸಂಸ್ಥೆಯಿಂದ ಅಭಿವೃದ್ಧಿ ಕಾಮಗಾರಿಗಳಿಗೆ 12 ಕೋಟಿ. 13ನೇ ಹಣಕಾಸು ಅನುದಾನದ 30 ಲಕ್ಷ ವೆಚ್ಚದಲ್ಲಿ ಮಳೆ ನೀರು, ಚರಂಡಿ, ಕುಡಿವ ನೀರು ಸರಬರಾಜಿಗೆ ಪೈಪ್ಲೈನ್ ವಿಸ್ತರಣೆ, ಉದ್ಯಾನವನ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ನಿರೀಕ್ಷಿಸಿದೆ. ರಾಜ್ಯ ಸರ್ಕಾರದಿಂದ ಸಿಎಂಎಸ್ಎಂಟಿಡಿಪಿ-2 ಅನುದಾನ 6 ಕೋಟಿಯಲ್ಲಿ ಮುಖ್ಯ ರಸ್ತೆಗಳು, ಸೇತುವೆ ನಿರ್ಮಾಣ ಕಾಮಗಾರಿ ನಿರೀಕ್ಷಿಸಲಾಗಿದೆ. ಎಸ್ಎಫ್ಸಿ ಮುಕ್ತನಿಧಿಯಲ್ಲಿ 4 ಕೋಟಿಯ ಕಾಮಗಾರಿಗಳು. ಬಿಆರ್ಜಿಎಫ್ ಯೋಜನೆಯಡಿ ಕೆರೆ ಅಭಿವೃದ್ಧಿಗೆ ಹಾಗೂ ಇತರೆ ಐಇಸಿ ಕಾರ್ಯಕ್ರಮಗಳಿಗೆ 1 ಕೋಟಿ ಕಾಯ್ದಿರಿಸಿದೆ. ಇದರಲ್ಲಿ ಪಟ್ಟಣದ ಎಲ್ಲ ಆಸ್ತಿಗಳ ವಿವರ ಒಳಗೊಂಡ ಸ್ಮಾರ್ಟ್ಕಾರ್ಡ್ ಒದಗಿಸುವ ವ್ಯವಸ್ಥೆ ಕಲ್ಪಿಸಲು 10 ಲಕ್ಷ ಕಾಯ್ದಿರಿಸಲಾಗಿದೆ. ರಾಜ್ಯ ಹಣಕಾಸು ಆಯೋಗದ ಅನುದಾನದಲ್ಲಿ ಕುಡಿವ ನೀರು ಹಾಗೂ ಇತರೆ ಮೂಲ ಸೌಲಭ್ಯಕ್ಕೆ 60 ಲಕ್ಷ ಕಾಯ್ದಿರಿಸಿದೆ. ಶೇ.22.77, ಶೇ.7.25 ಮತ್ತು ಶೇ.3 ಯೋಜನೆಯಲ್ಲಿ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ, ಅಂಗವಿಕಲರಿಗೆ ಕಲ್ಯಾಣಕಾರಿ ಯೋಜನೆಗೆ 55 ಲಕ್ಷ ಕಾಯ್ದಿರಿಸಲಾಗಿದೆ.
300 ಮನೆಗಲಿಗೆ ಅನುದಾನ: ಹೊಸ ಸೋಲಾರ್ ದೀಪ ಅಳವಡಿಸಲು 50 ಲಕ್ಷ ಅನುದಾನ ಕಾಯ್ದಿರಿಸಿದೆ. ನೈರ್ಮಲ್ಯ ಮತ್ತು ಘನತ್ಯಾಜ್ಯ ವಸ್ತುಗಳ ನಿರ್ವಹಣೆಗೆ 20 ಲಕ್ಷ ಎಸ್ಎಫ್ಸಿ ಅನುದಾನ ಯಂತ್ರೋಪಕರಣಗಳು, ಸಸಿ ನೆಡುವಿಕೆ. ರಾಜೀವಗಾಂಧಿ ವಸತಿ ನಿಗಮ ನಿಯಮಿತ ಸಂಸ್ಥೆ ಸಹಯೋಗದಲ್ಲಿ 300 ಮನೆಗಳ ನಿರ್ಮಾಣ. ಪಟ್ಟಣದ ಸ್ವಚ್ಛತೆ ಕಾಪಾಡಲು ಹೊರಗುತ್ತಿಗೆ ಕಾರ್ಯಚರಣೆ ಮುಖಾಂತರ ಹೆಚ್ಚುವರಿ ಕಾರ್ಮಿಕರನ್ನು ನಿಯೋಜಿಸಲು 20 ಲಕ್ಷ, ಮದರ್ ಟ್ಯಾಂಕ್ನಿಂದ ಕಸಬಾಲಿಂಗಸ್ಗೂರವರೆಗೆ ನೀರು ಸರಬರಾಜಿಗೆ 65 ಲಕ್ಷ, ವಾಣಿಜ್ಯ ಮಳಿಗೆಗಳ ಸಂಕೀರ್ಣ ನಿರ್ಮಾಣಕ್ಕೆ 25 ಲಕ್ಷ, ಪುರಸಭೆ ಸಿಬ್ಬಂದಿಗೆ ವಸತಿ ಗೃಹಗಳ ಸಂಕೀರ್ಣ ನಿರ್ಮಾಣಕ್ಕೆ 10 ಲಕ್ಷ ಕಾಯ್ದಿರಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷ ಕುಮಾರಸ್ವಾಮಿ ಸಾಲ್ಮನಿ ಸಭೆಯಲ್ಲಿ ವಿವರಿಸಿದರು.
ಉಪಾಧ್ಯಕ್ಷೆ ಛೋಟೀಮಾ, ಸದಸ್ಯರಾದ ಖಾದರಪಾಶಾ, ಶಿವಪ್ರಸಾದ ಪಂಚಾಕ್ಷರಿಮಠ, ಅನೀಸ್ ಪಾಶಾ, ಶರಣಗೌಡ ಪಾಟೀಲ್, ವಿನಯಕುಮಾರ, ಬಾಬಾ ಖಾಜಿ, ರವಿ ಚೌಧರಿ, ಗುಂಡೇರಾವ್ ದೇಸಾಯಿ, ಬಾಬುರೆಡ್ಡಿ, ಎಂ.ಡಿ.ರಫೀ, ರುದ್ರಪ್ಪ ಬ್ಯಾಗಿ ಇದ್ದರು. ನೂತನ ನಾಮನಿರ್ದೇಶನ ಸದಸ್ಯರಿಗೆ ಸನ್ಮಾನಿಸಲಾಯಿತು.