ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಬಸವಣ್ಣ

Vishwanath S
Updated On : 24 Feb 2014, 11:25 am

ಕ.ಪ್ರ. ವಾರ್ತೆ  ಮುದಗಲ್  ಫೆ.23
ವಿಶ್ವಗುರು ಬಸವಣ್ಣನವರು 21ನೇ ಶತಮಾನದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿದ ಮಹಾತ್ಮರು ಅವರು ಹಾಕಿಕೊಟ್ಟ ಮಾರ್ಗದಿಂದಲೇ ಸರ್ಕಾರಗಳು ಸಾಮಾಜಿಕ ನ್ಯಾಯದ ನೆಲಗಟ್ಟನ್ನು ಗಟ್ಟಿಗೊಳಿಸುತ್ತಿವೆ ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು.
ಪಟ್ಟಣದ ಆಶೋಕಗೌಡ ಪಾಟೀಲ್ ಕಾಲೋನಿಯಲ್ಲಿ ಸಾಣೇಹಳ್ಳಿಯ ಶಿವಕುಮಾರ ಸ್ವಾಮಿಗಳ ಕಲಾ ಬಳಗದಿಂದ ಆಶೋಕಗೌಡ, ಸುರೇಂದ್ರಗೌಡ ಪಾಟೀಲ್ ಹಾಗೂ ಗೆಳೆಯರ ಬಳಗದಿಂದ ಏರ್ಪಡಿಸಿದ್ದ ಮಹಾಬೆಳಗು ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಶರಣರ ತತ್ವಾದರ್ಶಗಳು, ತಾತ್ವಿಕ ಹಿನ್ನೆಲೆಗಳನ್ನು ಜನರಿಗೆ ನಾಟಕದ ಮೂಲಕ ತಿಳಿಸುವ ಈ ಕಾರ್ಯಕ್ರಮ ಸ್ತುತ್ಯಾರ್ಹವಾಗಿದೆ ಎಂದರು.
ಶ್ಲಾಘನೆ: ದಿನೇ ದಿನೇ ಜನಸಂಖ್ಯೆ ಬೆಳೆಯುತ್ತಿದ್ದು ಜನರಲ್ಲಿ ಸ್ನೇಹ ಭಾವನೆಗಳು ಕಡಿಮೆಯಾಗುತ್ತಿದೆ. ದೇಶದಲ್ಲಿ ಅಸೂಯೆ ಗುಣಗಳು ಹೆಚ್ಚುತ್ತಿದ್ದರಿಂದ ಶಾಂತಿ, ನೆಮ್ಮದಿ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜನರಿಗೆ ಶಾಂತಿ, ನೆಮ್ಮದಿ, ಪೂರ್ವಜರ ನೆನಪುಗಳನ್ನು ಮೆಲಕುಹಾಕುವಂತಹ ಕಾರ್ಯಕ್ರಮಗಳು ಅವಶ್ಯವಾಗಿದ್ದು ಇಲ್ಲಿನ ಗೆಳೆಯರ ಬಳಗ ನಾಟಕ ಪ್ರದರ್ಶನವನ್ನು ಏರ್ಪಡಿಸಿರುವುದು ಶ್ಲಾಘನೀಯ ಎಂದರು. ಇನ್ನೊಬ್ಬ ಅಥಿತಿ ಲಿಂಗಸ್ಗೂರು ವಿವಿ ಸಂಘದ ಆಡಳಿತಾಧಿಕಾರಿ ಬಸವಂತರಾಯ ಕುರಿ ಮಾತನಾಡಿ, ಮಾನವ ಚಳವಳಿಗಳು 12ನೇ ಶತಮಾನದಿಂದಲೂ ನಡೆದುಕೊಂಡು ಬಂದಿವೆ. ವಚನಕಾರರು ತಮ್ಮ ಅನುಭವಗಳನ್ನು ವಚನ ರೂಪದಲ್ಲಿ ಬರೆದು ಮುಂದಿನ ಪೀಳಿಗೆಗೆ ಸಂದೇಶಗಳನ್ನು ನೀಡುವ ನಿಟ್ಟಿನಲ್ಲಿ ಜನರಿಗೆ ತಲುಪಿಸಿದರು. ಸಾಣೆಹಳ್ಳಿ ಕಲಾತಂಡ ರಾಜ್ಯದ ಮೂಲೆ ಮೂಲೆಗಳಿಗೂ ಸಂಚರಿಸಿ ನಾಟಕ ಪ್ರದರ್ಶನದ ಮೂಲಕ ಶರಣರ ಆದರ್ಶಗಳನ್ನು ಪ್ರಚಾರ ಮಾಡುತ್ತಿರುವುದು ಒಳ್ಳೆಯ ಕಾರ್ಯ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಕರಡಕಲ್, ಪಪಂ ಮಾಜಿ ಅಧ್ಯಕ್ಷ ಅಶೋಕಗೌಡ ಪಾಟೀಲ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಹಾಜಿಮಲಂಗ ಬಾಬಾ ಉಪಸ್ಥೀತರಿದ್ದರು. ಕಾರ್ಯಕ್ರಮ ನಿರೂಪಣೆ ಅನಿಕುಮಾರ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement