ಅಕ್ರಮ ಮಣ್ಣು ಸಾಗಣೆ; ಯಂತ್ರಗಳ ಜಪ್ತಿ
ಮುದಗಲ್: ಪಟ್ಟಣ ಸಮೀಪದ ಆಮದಿಹಾಳ ಗ್ರಾಮದ ಸರ್ಕಾರಿ ಗೈರಾಣದಲ್ಲಿ ಅಕ್ರಮವಾಗಿ ಮಣ್ಣು ಸಾಗಣೆ ಮಾಡಲು ಬಳಸುತ್ತಿದ್ದ ಯಂತ್ರಗಳನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಬುಧುವಾರ ಜಪ್ತಿ ಮಾಡಿಕೊಂಡ ಘಟನೆ ಜರುಗಿದೆ. ಗುತ್ತಿಗೆದಾರ ಬಿ.ಆರ್. ಮೇಟಿಯವರ 2011- 12ನೇ ಸಾಲಿನ ಆಮದಿಹಾಳ ಗ್ರಾಮದಿಂದ ಸಜ್ಜಲಗುಡ್ಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಲೋಕೋಪಯೋಗಿ ಇಲಾಖೆಯಿಂದ 2.30 ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು ನಿರ್ವಹಿಸಲು ಗುತ್ತಿಗೆದಾರರು ಸರ್ಕಾರಿ ಜಮೀನಿನಿಂದ ಮರಂ ತುಂಬುತ್ತಿರುವ ಮಾಹಿತಿ ಆಧರಿಸಿ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಯಂತ್ರೋಪಕರಣಗಳನ್ನು ವಶಕ್ಕೆ ತೆಗೆದುಕೊಂಡು ಪೊಲೀಸ್ ಸುಪರ್ದಿಗೆ ಒಪ್ಪಿಸಿರುವ ಘಟನೆ ನಡೆದಿದೆ. ಕಂದಾಯ ಇಲಾಖೆಯ ಗ್ರಾಮ ಸಹಾಯಕ ಮೈಬೂಬ, ಗ್ರಾಪಂ ಸದಸ್ಯರಾದ ಹನಮಗೌಡ, ಹುಸೇನಸಾಬ, ಮೋದಿನ ಸಾಬ, ಲಕ್ಷ್ಮಣ್ಣ, ಯಂಕನಗೌಡ ಸೇರಿದಂತೆ ಇತರರಿದ್ದರು.