ಗಣೇಶ, ರಾಮಲಿಂಗೇಶ್ವರ ದೇವಾಲಯದ ವಾರ್ಷಿಕೋತ್ಸವ
ಮುದಗಲ್: ಪಟ್ಟಣದ ರಾಮಲಿಂಗೇಶ್ವರ ಕಾಲೋನಿಯಲ್ಲಿ ಕಾರ್ಯಕ್ರಮ ಜರುಗಿತು.
ವಾರ್ಷಿಕೋತ್ಸವದ ಅಂಗವಾಗಿ ಬೆಳಗಿನ ಜಾವ ಕಳಸ ಕುಂಭ ಮೆರವಣಿಗೆ ಮಧ್ಯಾಹ್ನದ ವೇಳೆಗೆ ದೇವಾಲಯಕ್ಕೆ ಕಳಸಾರೋಹಣ ಜರುಗಿತು. ನಂತರದಲ್ಲಿ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ನಂತರದಲ್ಲಿ ಬಂದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಿದರು. ವಾರ್ಷಿಕೋತ್ಸವದಲ್ಲಿ ರಜನೀಕಾಂತ ಶೆಟ್ಟಿ, ಎಲ್.ಟಿ. ನಾಯ್ಕ, ಶಂಕರಗೌಡ ಕಿಡದೂರ, ಬಾಲಣ್ಣ, ಪ್ರಕಾಶ ನಿಲೊಗಲ್ಲ, ಮಹೇಶ ವಸ್ತ್ರದ್, ರಾಜು ಮಾಲಿಪಾಟೀಲ್, ಮಹಾಂತೇಶ ಪಾಟೀಲ್, ಜಗನ್ನಾಥ ಕುಲಕರ್ಣಿ ಸೇರಿದಂತೆ ಅನೇಕರು ಇದ್ದರು.