ಬನ್ನಿಗೋಳ ವೀರಭದ್ರೇಶ್ವರ ಜಾತ್ರೆ
ಮುದಗಲ್: ಸಾಮೂಹಿಕ ವಿವಾಹಗಳಿಂದಾಗಿ ದುಂದುವೆಚ್ಚಕ್ಕೆ ಕಡಿವಾಣ ಬೀಳುವುದಲ್ಲದೆ, ಬಡವರಿಗೆ ಸಾಲದ ಹೊರೆ ತಪ್ಪಿಸಿದಂತಾಗುತ್ತದೆ ಎಂದು ಅಂಕಲಿಮಠದ ವೀರಭದ್ರ ಸ್ವಾಮಿಗಳು ಹೇಳಿದರು.
ಸಮೀಪದ ಬನ್ನಿಗೋಳ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ 38 ಜೋಡಿ ಸಾಮೂಹಿಕ ವಿವಾಹ, ಪುರಾಣ ಮಹಾಮಂಗಲದಲ್ಲಿ ತುಲಾಭಾರ ಸ್ವೀಕರಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಮರೇಶ್ವರ ಗಜದಂಡ ಸ್ವಾಮೀಜಿ, ಶಾಸಕ ಮಾನಪ್ಪ ವಜ್ಜಲ್, ಮುಖಂಡರಾದ ಟಿ.ಆರ್.ನಾಯಕ, ಸಿದ್ದು ಬಂಡಿ, ಎಪಿಎಂಸಿ ಅಧ್ಯಕ್ಷ ಚನ್ನವೀರಪ್ಪಗೌಡ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಡಾ. ಅಯ್ಯಪ್ಪ ಬನ್ನಿಗೋಳ, ಮುಖಂಡರಾದ ಸುರೇಂದ್ರಗೌಡ ಪಾಟೀಲ್, ಮಹಾಂತೇಶ ಪಾಟೀಲ್, ತಾ.ಪಂ. ಸದಸ್ಯ ರುದ್ರಗೌಡ ಪಾಟೀಲ್, ನಾಗನಗೌಡ ಪಾಟೀಲ್ ತುರಡಗಿ, ಗುರುಬಸಪ್ಪ ಸಜ್ಜನ್ ಇದ್ದರು. ಇದೇ ಸಂದರ್ಭದಲ್ಲಿ 38 ಜೋಡಿ ಸಾಮೂಹಿಕ ವಿವಾಹಗಳ ಕಾರ್ಯಕ್ರಮವನ್ನು ವೀರಯ್ಯ ಶಾಸ್ತ್ರಿಗಳು ಹಳ್ಳಿಕೇರಿ, ಮಹಾಂತೇಶ ಇಲಕಲ್ ನೆರವೇರಿಸಿದರು. 108 ಸುಮಂಗಲೆಯರಿಂದ ಕುಂಭಗಳ ಮೆರವಣಿಗೆ ನಡೆಯಿತು.