ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಂತಃಶಕ್ತಿ ಅರಿಯಿರಿ: ಸ್ವಾಮೀಜಿ

Lingaraj Badiger
Updated On : 1 Mar 2014, 11:17 am

ರಾಯಚೂರು: ಮನುಷ್ಯ ತನ್ನೊಳಗಿನ ಅಂತಃಶಕ್ತಿಯನ್ನು ಅರಿಯುವ ಪ್ರಯತ್ನ ಮಾಡಬೇಕು. ಆ ಮೂಲಕ ಪ್ರಪಂಚವನ್ನು ಜಯಿಸುವ ಸಾಧನೆ ಮಾಡಲು ಸಾಧ್ಯ ಎಂದು ಗದಗ- ಬಿಜಾಪುರ ರಾಮಕೃಷ್ಣ ವಿವೇಕಾನಂದಾಶ್ರಮದ ಮುಖ್ಯಸ್ಥ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ನಗರದ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಗುರುವಾರ ಸಂಜೆ ನಗರದ ಶಾರದಾ ಶಕ್ತಿ ಪೀಠದಿಂದ ಸ್ವಾಮಿ ವಿವೇಕಾನಂದರ 151ನೇ ಜನ್ಮ ವರ್ಷಾಚರಣೆ ಹಿನ್ನೆಲೆ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಮತ್ತು ಮನುಷ್ಯ ಶಕ್ತಿಗಳು ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದ್ದೂ ಇಲ್ಲದಂತಿದ್ದೇವೆ: ಸಾವಿರಾರು ವರ್ಷಗಳ ಹಿಂದೆಯೇ ದೇಶದ ಅನೇಕ ಮಹಾನ್ ವ್ಯಕ್ತಿಗಳು, ಪುರಾಣ ಪುರುಷರು, ಆಗ ರಚಿಸಲಾದ ಪುಸ್ತಕಗಳು ಬ್ರಹ್ಮಾಂಡದ ಪರಿಕಲ್ಪನೆ ವಿವರಿಸಿವೆ. ಆ ಕಾಲಘಟ್ಟದಲ್ಲಿ ಯಾವುದೇ ತಂತ್ರಜ್ಞಾನದ ಪರಿಕರವಿರಲಿಲ್ಲ. ಈಗ ಎಲ್ಲ ಇದ್ದೂ ನಾವೆಲ್ಲರೂ ಶಕ್ತಿಯಿಲ್ಲದವರಂತೆ ಬದುಕು ಕಳೆಯುತ್ತಿರುವುದು ಶೋಚನೀಯ ಎಂದರು.
ಮನುಷ್ಯನ ಆದ್ಯತೆಗಳ ಬಗ್ಗೆಯೇ ಆತನಿಗೆ ಅರಿವಿಲ್ಲದಂತಾಗಿದೆ. ದೇಹ ಸೌಂದರ್ಯ, ಬೆಳವಣಿಗೆಗೆ ಒತ್ತು ಕೊಡುವ ಪರಿಪಾಠ ಹೆಚ್ಚಾಗಿದೆ. ಜ್ಞಾನವೃದ್ಧಿಗೆ ಮೊದಲಾದ್ಯತೆ ನೀಡದಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದ ಅವರು, ಧ್ಯಾನದ ಮೂಲಕ ಭೌತಿಕ ಶಕ್ತಿಯನ್ನು ವೃದ್ಧಿಸಿಕೊಂಡಲ್ಲಿ ಜಾಗತಿಕ ಮಟ್ಟದ ಸಾಧನೆ ಮೆರೆಯಲು ಸಾಧ್ಯ ಎಂದರು.
ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಾಮಿ ವಿವೇಕಾನಂದರ ಛಲ, ಸತತ ಪರಿಶ್ರಮದ ಮೌಲ್ಯಗಳನ್ನು ಅಳವಡಿಸಿಕೊಂಡಲ್ಲಿ ಉನ್ನತವಾದದ್ದನ್ನು ಸಾಧಿಸಲು ಸಾಧ್ಯ ಎಂದು ಹೇಳಿದರು.
ಹೊಸಪೇಟೆಯ ಹಂಸಾಂಬಾ ಶಾರದಾಶ್ರಮದ ಮುಖ್ಯಸ್ಥೆ ಪ್ರಭಾವತಿ ಮಾತಾಜಿ, ರಾಯಚೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಶಿಕ್ಷಣ ನಿರ್ದೇಶಕ ಡಾ. ಸಿ.ವಿ. ಪಾಟೀಲ್, ನವೋದಯ ಶಿಕ್ಷಣ ಸಮೂಹ ಸಂಸ್ಥೆ ರಿಜಿಸ್ಟ್ರಾರ್ ಡಾ. ಟಿ.ಶ್ರೀನಿವಾಸ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement