ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

4ರಿಂದ ಹಜರತ್ ಬಡೇಸಾಬ್ ಉರೂಸ್

Lingaraj Badiger
Updated On : 2 Jan 2014, 11:50 am

ರಾಯಚೂರು: ತಾಲೂಕಿನ ಯರಗೇರಾ ಗ್ರಾಮದಲ್ಲಿನ ಪ್ರಸಿದ್ಧ ಧಾರ್ಮಿಕ ಕೇಂದ್ರ ಹಜರತ್ ಬಡೇಸಾಬ್ ಅವರ ದರ್ಗಾದಲ್ಲಿ 115ನೇ ಉರೂಸ್ ಜ.4ರಿಂದ ಎರಡು ದಿನಗಳ ಕಾಲ ನಡೆಯಲಿದೆ. ಈ ಕುರಿತು ಗ್ರಾಮದ ದರ್ಗಾದ ಆಡಳಿತ ಮಂಡಳಿಯು ಪ್ರಕಟಣೆ ನೀಡಿ, ಜ.4ರಂದು ರಾತ್ರಿ 9ಕ್ಕೆ ಉರೂಸ್ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಜನಾಬ್ ಸೈಯದ್ ಹಫೀಜುಲ್ಲಾ ಖಾದ್ರಿ ಅವರ ಮನೆಯಲ್ಲಿ ಫಾತೆಹಾ ಕಾರ್ಯಕ್ರಮ ನಡೆಯಲಿದೆ. ನಂತರ ಅವರ ಮನೆಯಿಂದ ಗಂಧದ ಮೆರವಣಿಗೆ ಹೊರಟು ಬೆ.5ಕ್ಕೆ ದರ್ಗಾ ತಲುಪಲಿದೆ. ಜ.5ರಂದು ಉರೂಸ್ ಮತ್ತು ಜ.6ರಂದು ಜಿಯಾರತ್ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ ಎಂದು ತಿಳಿಸಿರುವ ದರ್ಗಾ ಆಡಳಿತ ಮಂಡಳಿಯ ಕಾರ್ಯದರ್ಶಿ ಮಹ್ಮದ್ ನಿಜಾಮುದ್ದೀನ್, ಪಾಲ್ಗೊಳ್ಳಲು ಆಗಮಿಸುವ ಭಕ್ತರಿಗೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಉರೂಸ್ ವೇಳೆ ಸಮರ್ಪಕ ಕುಡಿವ ನೀರು, ವಿದ್ಯುತ್ ಸೌಲಭ್ಯ, ಆರೋಗ್ಯ ಮತ್ತಿತರೆ ಸೇವೆಗಳನ್ನು ಒದಗಿಸಲು ತಾಲೂಕು ಆಡಳಿತಕ್ಕೆ ಈಗಾಗಲೇ ಮನವಿ ಮಾಡಲಾಗಿದ್ದು, ಸೂಕ್ತ ಭರವಸೆ ದೊರೆತಿದೆ. ಜ.6ರಂದು ಮ.2ಕ್ಕೆ ಸೈಯದ್ ಹಫೀಜುಲ್ಲಾ ಅವರಿಂದ ಜಿಯಾರತ್ ಫಾತೆಹಾ ನೆರವೇರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement