ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಾಲಕಿಯರ ಕಾಲೇಜಲ್ಲಿ ಪುಂಡರ ಗುಂಡು ಪಾರ್ಟಿ

Lingaraj Badiger
Updated On : 2 Jan 2014, 11:50 am

ಸಿಂಧನೂರು: ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ತರಗತಿ ಕೊಠಡಿಯ ಬಾಗಿಲ ಮುಂದೆಯೇ ಪುಂಡರ ಗುಂಪೊಂದು ಗುಂಡು ಪಾರ್ಟಿ ನಡೆಸಿ ಮದ್ಯದ ಬಾಟಲ್, ಅನ್ನದ ಪ್ಯಾಕೆಟ್, ಊಟದ ಎಲೆಗಳನ್ನು ಎಸೆದ ಘಟನೆ ಮಂಗಳವಾರ ಮಧ್ಯ ರಾತ್ರಿ ಹೊಸ ವರ್ಷದ ಹಿನ್ನೆಲೆಯಲ್ಲಿ ನಡೆದಿದೆ.
ಆವರಣದಲ್ಲಿ ಹೊಲಸು ಮಾಡಿದ್ದಲ್ಲದೇ ಕಿಟಕಿ ಗಾಜುಗಳನ್ನು ಒಡೆದಿದ್ದಾರೆ. ಬುಧವಾರ ಹೊಸ ವರ್ಷದ ಖುಷಿಯಲ್ಲಿ ಕಾಲೇಜಿಗೆ ತೆರಳಿದ ವಿದ್ಯಾರ್ಥಿನಿಯರು ಕೊಠಡಿಯ ಮುಂದೆ ಬಿದ್ದಿದ್ದ ಹೊಲಸನ್ನು ಸ್ವಚ್ಛಗೊಳಿಸಿ ತರಗತಿಗಳಿಗೆ ತೆರಳುವಂತಾಯಿತು.
ಕಾಲೇಜಿನ ಕೊಠಡಿ ಮತ್ತು ಆವರಣದಲ್ಲಿ ದಿನವೂ ಪುಂಡರ ಗುಂಪು ಒಂದಿಲ್ಲೊಂದು ರೀತಿಯಲ್ಲಿ ಇಂತಹ ಕೃತ್ಯಗಳನ್ನು ನಡೆಸುವುದು ಸಾಮಾನ್ಯವಾಗಿದೆ. ರಾತ್ರಿ ಸಮಯ ದುರ್ಬಳಕೆ ಮಾಡಿಕೊಂಡು ಅನೇಕರು ವೃಥಾ ಆವರಣದ ಪರಿಸರವನ್ನು ಹದಗೆಡಿಸುತ್ತಿದ್ದಾರೆ ಎಂದು ಉಪನ್ಯಾಸಕ ಸಿಬ್ಬಂದಿ ದೂರಿದರು.
ಪೊಲೀಸರ ಗಸ್ತಿಗೆ ಮನವಿ: ಕಾಲೇಜಿನ ತರಗತಿಗಳು ಮುಗಿದ ನಂತರ ಕೊಠಡಿಗೆ ಭದ್ರತೆ ಇಲ್ಲದಂತಾಗಿದೆ. ಪೊಲೀಸ್ ಅಧಿಕಾರಿಗಳು ರಾತ್ರಿ ಸಮಯದಲ್ಲಿ ಗಸ್ತು ತಿರುಗುವ ಮೂಲಕ ಪುಂಡ, ಪೋಕರಿಗಳ ಹಾವಳಿಗೆ ಕಡಿವಾಣ ಹಾಕುವಂತೆ ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement