ಅನೀಸ್ ಫಾತಿಮಾಗೆ ರಾಜ್ಯ ಮಟ್ಟದ ಪ್ರಶಸ್ತಿ
ಸಿಂಧನೂರು: ನಗರದ ಸುಕಾಲಪೇಟೆ ಸರ್ಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕಿ ಅನೀಸ್ ಫಾತಿಮಾ ಕರ್ನಾಟಕ ಆರ್ಟ್ ಸೊಸಾಯಿಟಿ ನಡೆಸಿದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಹಿರಿಯ ಚಿತ್ರಕಲಾವಿದರ ವಿಭಾಗದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಅಕ್ರಾಲಿಕ್ ಮಧ್ಯಮದಲ್ಲಿ ಕ್ಯಾನ್ವಾಸ್ ಮೇಲೆ ಚಿತ್ರಿಸಿರುವ ನಿಸರ್ಗದ ಜೊತೆಗೆ ಬುದ್ಧ ಎನ್ನುವ ಶೀರ್ಷಿಕೆಯ ಕಲಾಕೃತಿ ಎಲ್ಲರ ಗಮನ ಸೆಳೆದಿದೆ. ಜನವರಿ 1ರಿಂದ ಜ.4ರವರೆಗೆ ತುಮಕೂರಿನ ಪ್ರಸಿದ್ಧ ಕಲಾ ಗ್ಯಾಲರಿಯಲ್ಲಿ ಕಲಾಕೃತಿ ಪ್ರದರ್ಶನ ನಡೆಯಲಿದೆ.
ರಾಜ್ಯಮಟ್ಟದಲ್ಲಿ ಗಮನ ಸೆಳೆದಿರುವ ಅನೀಸ್ ಫಾತಿಮಾ ಅವರನ್ನು ಕೊನೆಯ ದಿನದ ಸಮಾರಂಭದಲ್ಲಿ ಆರ್ಟ್ ಸೊಸಾಯಿಟಿಯಿಂದ ಸನ್ಮಾನಿಸಿ ಗೌರವಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.