ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಎಂಜಿನಿಯರ್ ಮುಲ್ಲಾಗೆ ಬೀಳ್ಕೊಡುಗೆ

Lingaraj Badiger
Updated On : 3 Jan 2014, 11:47 am

ಸಿಂಧನೂರು: ಸಿಂಧನೂರಿನ ನೀರಾವರಿ ಇಲಾಖೆಯ ಕಾರ್ಯ ನಿರ್ವಾಹಕ ಇಂಜಿನಿಯರ್ ಎಂ.ಆರ್. ಮುಲ್ಲಾ ಡಿ. 31 ರಂದು ವಯೋ ನಿವೃತ್ತಿಯಾದರು.
ಈ ಸಂದರ್ಭದಲ್ಲಿ ಮುಲ್ಲಾರವರಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಗುತ್ತೇದಾರ ಹಂಪಯ್ಯಸ್ವಾಮಿ ರ್ಯಾವಿಹಾಳ, ನೀರಾವರಿ ಇಲಾಖೆಯಲ್ಲಿ ಇಂತಹ ಸರಳ, ಆದರ್ಶ ವ್ಯಕ್ತಿತ್ವದ ಎಂಜಿನಿಯರ್ರನ್ನು ತಾವು ಇದೇ ಮೊದಲು ನೋಡಿರುವುದಾಗಿ ಹೇಳಿದರು. ಮುಲ್ಲಾ ಸಾಹೇಬರು ಎಲ್ಲರೊಂದಿಗೆ ಸಹೃದಯದಿಂದ ಮಾತನಾಡುತ್ತಿದ್ದರು ಎಂದರು.
ಸಮಾರಂಭದಲ್ಲಿ ಎಂಜಿನಿಯರ್ಗಳಾದ ಟಿ.ಜಿ. ಮಾಲಿ ಬಿರಾದಾರ, ಶಿರಾಜುದ್ದಿನ್, ಎ. ಹನುಮಂತಪ್ಪ, ಕುಮಾರಸ್ವಾಮಿ ಮಾತನಾಡಿದರು. ಹನುಮಂತಪ್ಪನವರಿಗೆ ಪ್ರಭಾರಿಯಾಗಿ ಚಾರ್ಜ್ ನೀಡಲಾಯಿತು.
ಸಮಾರಂಭದಲ್ಲಿ ವಿವಿಧ ಗುತ್ತೇದಾರರು ಮುಲ್ಲಾ ಅವರನ್ನು ಸನ್ಮಾನಿಸಿದರು. ಗುರು ಭೀಮರಾವ್ ಸ್ವಾಗತಿಸಿದರು. ವ್ಯವಸ್ಥಾಪಕ ಖಾಜಾಮೈನುದ್ದಿನ್ ನಿರೂಪಿಸಿದರು. ಶಿವಕುಮಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement