ಮಾ.18ರಿಂದ ಅಖಿಲ ಭಾರತ ಕಣ್ವ ಪರಿಷತ್ನಿಂದ 14ನೇ ಅಧಿವೇಶನ
ಸಿಂಧನೂರು: ಅಖಿಲ ಭಾರತ ಕಣ್ವ ಪರಿಷತ್ನಿಂದ 14ನೇ ಅಧಿವೇಶನವು ಮಾರ್ಚ್ 18ರಿಂದ 20ರವರೆಗೆ ಮೂರು ದಿನ ಮಹಾರಾಷ್ಟ್ರದ ಗೋದಾವರಿ ತೀರದ ಬಬಲ್ ಗಾವ್ಂಗಾದಲ್ಲಿ ನಡೆಯುತ್ತದೆ ಎಂದು ಪರಿಷತ್ನ ರಾಷ್ಟ್ರೀಯ ಅಧ್ಯಕ್ಷ ಪಿ.ಎಂ. ಕುಲಕರ್ಣಿ ತಿಳಿಸಿದರು. ನಗರದ ಶ್ರೀರಾಮ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಈ ಅಧಿವೇಶನಕ್ಕೆ ಪ್ರವೇಶ ಶುಲ್ಕ 50, ಪ್ರತಿನಿಧಿ ಶುಲ್ಕ 250 ಇರುತ್ತದೆ. ಈಗಾಗಲೇ ಅಧಿವೇಶನದ ಗುಜರಾತ್, ಓರಿಸ್ಸಾ, ಪಶ್ಚಿಮ ಬಂಗಾಳದಲ್ಲಿ ಭೇಟಿ ನೀಡಿ ವಿವಿಧ ಸಭೆಗಳನ್ನು ನಡೆಸಿ ಅಧಿವೇಶನಕ್ಕೆ ಪಾಲ್ಗೊಳ್ಳಲು ಹಾಗೂ ಅದರ ಯಶಸ್ವಿಗೆ ತನು ಮನ ಧನದ ಸಹಾಯ ನೀಡುವಂತೆ ವಿನಂತಿಸಿದರು.
ಪರಿಷತ್ನ ರಾಜ್ಯಾಧ್ಯಕ್ಷ ಎನ್.ಎಚ್. ಕುಲಕರ್ಣಿ ಅಧಿವೇಶನದ ರೂಪರೇಷೆಗಳನ್ನು ವಿವರಿಸಿದರು. ಸಭೆಯಲ್ಲಿ ಬ್ರಾಹ್ಮಣ ಸಮಾಜದ ತಾಲೂಕಾಧ್ಯಕ್ಷ ರಾಮರಾವ್ ಕುಲಕರ್ಣಿ, ಉಪಾಧ್ಯಕ್ಷ ಚನ್ನಳ್ಳಿ ನರಸಿಂಗರಾವ್, ಮಾಜಿ ಅಧ್ಯಕ್ಷ ಶೇಷಗಿರಿರಾವ್ ಚನ್ನಳ್ಳಿ, ಮಠಾಧೀಕಾರ ನರಸಿಂಹಾಚಾರ್, ಮನೋಹರರಾವ್ ಕುಲ್ಕರ್ಣಿ, ನಾಗೇಂದ್ರಕುಮಾರ ಸಾಹುಕಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.
--
ಆದಿಶಕ್ತಿ ಸಂಘಟನೆಯಿಂದ ಪ್ರಶಸ್ತಿ ಪ್ರದಾನ
ರಾಯಚೂರು: ನಗರದ ಹರಿಜನವಾಡ ಪ್ರದೇಶದಲ್ಲಿ ಈಚೆಗೆ ಮಾದಿಗ ಅಗ್ನಿಶಕ್ತಿ ಸಂಘಟನೆಯ ಜಿಲ್ಲಾ ಸಮಿತಿಯಿಂದ ಈಚೆಗೆ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು.
ಸಮಾರಂಭದಲ್ಲಿ ನಗರಸಭೆ ಮಾಜಿ ಸದಸ್ಯ ಬೋಳಬಂಡಿ ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು. ಹುಸೇನಪ್ಪ ಭಂಡಾರಿಗಲ್, ಮುಖ್ಯಗುರು ನರಸಪ್ಪ, ಸಂಘದ ಅಧ್ಯಕ್ಷ ಶ್ರೀನಿವಾಸ ಕಟ್ಟಿಮನಿ ಮಾತನಾಡಿ, ಮಾದಾರ ಚೆನ್ನಯ್ಯನವರ ಬದುಕು ಎಲ್ಲರಿಗೂ ಆದರ್ಶಪ್ರಾಯ ಎಂದರು. ಕಾರ್ಯಕ್ರಮದಲ್ಲಿ ವಿರೂಪಾಕ್ಷಪ್ಪ ಫತ್ತೇಪೂರ, ಜಗದೀಶ್ ಸೇರಿದಂತೆ ಅನೇಕರಿದ್ದರು. ಮಾದಾರ ಚೆನ್ನಯ್ಯ ಪ್ರಶಸ್ತಿಯನ್ನು ಮಾರೆಪ್ಪ ತಾತಾ, ಗೋಕರಪ್ಪ ತಾತಾ, ವಿರೂಪಾಕ್ಷಪ್ಪ, ಈರಣ್ಣ ತಾತಾ, ರಾಮಯ್ಯ ತಾತ, ಮಲ್ಲಯ್ಯ ತಾತಾ, ತಿಮ್ಮಯ್ಯ ತಾತಾ ಮತ್ತಿತರರಿಗೆ ಪ್ರದಾನ ಮಾಡಲಾಯಿತು. ಪ್ರಮುಖರು, ಜನತೆ ಪಾಲ್ಗೊಂಡಿದ್ದರು.