ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಗೆ ಅರ್ಜಿ ಕರೆ

Lingaraj Badiger
Updated On : 3 Jan 2014, 11:56 am

ರಾಯಚೂರು: ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್ ವತಿಯಿಂದ ಬಿಎಸ್ಸಿ(ಕೃಷಿ), ಬಿಟೆಕ್(ಕೃಷಿ ತಾಂತ್ರಿಕ) ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಗಳನ್ನು ಆಯೋಜಿಸಲಾಗಿದೆ. ಬಿಎಸ್ಸಿ(ಕೃಷಿ) ಮತ್ತು ಬಿಟೆಕ್(ಕೃಷಿ ತಾಂತ್ರಿಕ) ಹಾಗೂ ಸ್ನಾತಕ ಪದವಿ ಕೋರ್ಸ್ಗಳ ಪ್ರವೇಶಕ್ಕಾಗಿ ಎಲ್ಲ ರಾಜ್ಯಗಳ ಕೃಷಿ ವಿವಿ ಗಳಲ್ಲಿ 2014- 15ನೇ ಸಾಲಿಗೆ ಅರ್ಜಿ ಕರೆದಿದೆ. ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಅಭ್ಯರ್ಥಿಗಳಿಗೆ ಪ್ರವೇಶದ ಜತೆಗೆ ಪ್ರತಿ ತಿಂಗಳು 1 ಸಾವಿರ ಶಿಷ್ಯ  ವೇತನವನ್ನು ಮುಂದಿನ ನಾಲ್ಕು ವರ್ಷಗಳಿಗೆ ನೀಡಲಾಗುತ್ತದೆ. ಆಸಕ್ತರು ಎರಡು ವರ್ಷದ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು. ಅಥವಾ ಪಿಯುಸಿ ಸೈನ್ಸ್ 2ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಅರ್ಜಿ ನಮೂನೆ ಹಾಗೂ ಇತರೆ ಮಾಹಿತಿಗೆ ರಾಯಚೂರು ಕೃಷಿ ವಿವಿಯನ್ನು ಸಂಪರ್ಕಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ. 08532- 220157 ಅಥವಾ ಐಸಿಎಆರ್ ವೆಬ್ಸೈಟ್ಗೆ ಭೇಟಿ ನೀಡಲು ಕೋರಲಾಗಿದೆ.
20ರಿಂದ ಸೇನಾ ಭರ್ತಿ ರ್ಯಾಲಿ
ರಾಯಚೂರು: ಚಿಕ್ಕೋಡಿಯ ಬಿ.ಕೆ. ಕಾಲೇಜಿನ ಆವರಣದಲ್ಲಿ ಸೇನಾ ಭರ್ತಿ ರ್ಯಾಲಿಯನ್ನು ಜ. 20ರಿಂದ ಜ.30ರವರೆಗೆ ಆಯೋಜಿಸಲಾಗಿದೆ. ಭಾರತೀಯ ಸೇನೆಯ ಬೆಂಗಳೂರು ವಲಯ ಹಾಗೂ ಬೆಳಗಾವಿ ವಲಯದ ಅಧಿಕಾರಿಗಳು ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದು, ಸೇನೆಯ ಸೋಲ್ಜರ್ ಡ್ಯೂಟಿ, ಸೋಲ್ಜರ್ ಕ್ಲರ್ಕ್, ಸ್ಟೋರ್ ಕೀಪರ್ ಟೆಕ್ನಿಕಲ್, ನರ್ಸಿಂಗ್ ಅಸಿಸ್ಟೆಂಟ್ ಹಾಗೂ ಟ್ರೇಡಮನ್ ಹುದ್ದೆಗಳ ಭರ್ತಿ ನಡೆಯಲಿದೆ. ರ್ಯಾಲಿಯಲ್ಲಿ ರಾಯಚೂರು, ಯಾದಗಿರಿ, ಕೊಪ್ಪಳ, ಗುಲ್ಬರ್ಗ, ಬಳ್ಳಾರಿ, ಬೀದರ್ ಹಾಗೂ ಬೆಳಗಾವಿ ಜಿಲ್ಲೆಯ ಅಭ್ಯರ್ಥಿಗಳಲ್ಲದೇ ಕರ್ನಾಟಕದ ಇತರ ಜಿಲ್ಲೆಯ ಅಭ್ಯರ್ಥಿಗಳೂ ಭಾಗವಹಿಸಬಹುದು. ಆಂಗ್ಲ ಹಾಗೂ ಹಿಂದಿ ಭಾಷೆಯಲ್ಲಿರುವ ವಿವರಗಳೊಂದಿಗೆ ಎಲ್ಲ ದಾಖಲೆಗಳೊಂದಿಗೆ ರ್ಯಾಲಿಯಲ್ಲಿ ಹಾಜರಾಗಲು ಕೋರಿದೆ. ಹೆಚ್ಚಿನ  ಮಾಹಿತಿಗೆ ದೂ. 080- 25599290 ಇಲ್ಲಿಗೆ ಸಂಪರ್ಕಿಸಲು ಕರ್ನಲ್ ದುಶಂತಸಿಂಗ್ ತಿಳಿಸಿದ್ದಾರೆ.
ಅಮವಾಸ್ಯೆ; ವನಭೋಜನ
ಸಿಂಧನೂರು: ಸಿಂಧನೂರಿನ ಮಾಜಿ ಶಾಸಕ ದಿ.ಅಮರೇಗೌಡ ಗದ್ರಟಗಿ ಅವರ ಹೊಲದಲ್ಲಿ ಎಳ್ಳು ಅಮವಾಸ್ಯೆ ನಿಮಿತ್ತ ಬುಧವಾರ ವನಭೋಜನ ಏರ್ಪಡಿಸಿದ್ದರು. ನೂರಾರು ಜನ ಅವರ ಆತ್ಮೀಯರು, ಗೆಳೆಯರು, ಕುಟುಂಬದವರು ಪಾಲ್ಗೊಂಡಿದ್ದರು. ಕಳೆದ ಅನೇಕ ವರ್ಷಗಳಿಂದ ನಿರಂತರವಾಗಿ ಎಳ್ಳು ಅಮವಾಸ್ಯೆಯಂದು ಗದ್ರಟಗಿ ಕುಟುಂಬದವರು ವನಭೋಜನವನ್ನು ಏರ್ಪಡಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಹೊಲದ ಹುಣಸೆ ಗಿಡದ ಕೆಳಗೆ ಉತ್ತರ ಕರ್ನಾಟಕದ ಜವಾರಿ ಊಟವಾದ ಜೋಳದ ಸಜ್ಜೆ ರೊಟ್ಟಿ, ಎಣ್ಣೆ ಬದನೆಕಾಯಿ ಪಲ್ಯ, ಕೆಂಪು ಚಟ್ನಿ, ಹಸೆಹಿಟ್ಟು, ಎಳ್ಳಿನ ಚಿತ್ರಾನ್ನವನ್ನು ಆಗಮಿಸಿದ್ದ ಜನತೆ ಬಾಯಿಚಪ್ಪರಿಸುತ್ತಾ ಸವಿದರು. ಎಐಟಿಯುಸಿ ಮುಖಂಡ ವೆಂಕನಗೌಡ ಗದ್ರಟಗಿ, ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಅಶೋಕ ಗದ್ರಟಗಿ ಊಟದ ವ್ಯವಸ್ಥೆಯನ್ನು ಮಾಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement