ಇಂದಿನಿಂದ ಉರೂಸ್; ವಿಶೇಷ ಬಸ್ ಸೌಲಭ್ಯ
ರಾಯಚೂರು: ತಾಲೂಕಿನ ಯರಗೇರಾ ಗ್ರಾಮದಲ್ಲಿ ಜ.4ರಿಂದ 6ರವರೆಗೆ ನಡೆಯಲಿರುವ ಹಜರತ್ ಬಡೇಸಾಬ್ ಉರೂಸಿನ ಅಂಗವಾಗಿ ಈಶಾನ್ಯ ಸಾರಿಗೆ ಸಂಸ್ಥೆಯು ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ ಎಂದು ಸಂಸ್ಥೆ ತಿಳಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿಯು ಊರುಸಿನಲ್ಲಿ ಪಾಲ್ಗೊಳ್ಳಲು ಭಕ್ತರಿಗೆ ಅನುಕೂಲವಾಗುವಂತೆ ಯರಗೇರಾ-ಇಡಪನೂರು-ತಲಮಾರಿ, ಯರಗೇರಾ-ಗುಂಜಳ್ಳಿ-ಗಿಲ್ಲೆಸೂಗೂರು, ರಾಯಚೂರು-ಮಾಸದೊಡ್ಡಿ-ಯರಗೇರಾ, ಯರಗೇರಾ-ಐಜ್, ಯರಗೇರಾ-ಗುಂಜಳ್ಳಿ-ಉಪ್ರಾಳ ಗೋಡಿಹಾಳ-ಮಟಮಾರಿ ಮಧ್ಯೆ ಬಸ್ಗಳ ಸಂಚಾರ ಸೌಲಭ್ಯ ಕಲ್ಪಿಸಲಾಗಿದೆ.