ಇಂದು ಜಿಲ್ಲೆಗೆ ಸಚಿವ ಪಾಟೀಲ್ ಭೇಟಿ
ರಾಯಚೂರು: ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ ಅವರು ಜ.4ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಅವರು ಬೆಳಗ್ಗೆ 10ಕ್ಕೆ ನಗರದ ಕೃಷಿ ವಿವಿಯಲ್ಲಿ ಆಯೋಜಿಸಿರುವ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವಿಭಾಗೀಯ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ನಂತರ ಅವರು ಮಧ್ಯಾಹ್ನ 3ಕ್ಕೆ ಲಿಂಗಸ್ಗೂರು ತಾಪಂ ಕಚೇರಿಯಲ್ಲಿ ನಡೆಯಲಿರುವ ಲಿಂಗಸ್ಗೂರು ತಾಲೂಕಿನ ವಿವಿಧ ಇಲಾಖೆಗಳ ಅಭಿವೃದ್ಧಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಂಜೆ 7ಕ್ಕೆ ಸಂತೆಕೆಲ್ಲೂರಿನ ಘನಮಠ ಶಿವಯೋಗಿಗಳ 134ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಗುಲ್ಬರ್ಗಕ್ಕೆ ಪ್ರಯಾಣಿಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.