ಇಂದು ಸಿರಿಗಂಧ ಕಾರ್ಯಕ್ರಮ
ಸಿಂಧನೂರು: ನಗರದ ವೆಂಕಟೇಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ತಾಲೂಕು ಕಸಾಪನಿಂದ ಸಿರಿಗಂಧ ಕನ್ನಡ ಕಾರ್ಯಕ್ರಮವನ್ನು ಜ.4ರಂದು ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ಅಧ್ಯಕ್ಷೆ ರಮಾದೇವಿ ಶಂಭೋಜಿ ತಿಳಿಸಿದ್ದಾರೆ. ವೆಂಕಟೇಶ್ವರ ಪ್ರೌಢಶಾಲೆಯ ಮುಖ್ಯಗುರು ಗಂಗನಗೌಡ ಪೊಲೀಸ್ ಪಾಟೀಲ್ ಅಧ್ಯಕ್ಷತೆ ವಹಿಸವರು. ಮಲ್ಲಪ್ಪ ಬಾದರ್ಲಿ ಬಹುಮಾನ ವಿತರಿಸುವರು. ಗೀತಾ ಭಾಸ್ಕರ್ ಉದ್ಘಾಟಿಸುವರು. ಶರಣೇಗೌಡ, ದೇವೇಂದ್ರಗೌಡ ಭಾಗವಹಿಸುವರು.