ವಿವಿಧ ಪ್ರಶಸ್ತಿ ಸಾಧನೆ
ರಾಯಚೂರು: ಇತ್ತೀಚೆಗೆ ಮಧುರೈನಲ್ಲಿ ಜೆಸಿಐ ಸಂಸ್ಥೆಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ರಾಯಚೂರು ಜೆಸಿಐ ಸಂಸ್ಥೆಗೆ ವಿವಿಧ ಪ್ರಶಸ್ತಿಗಳು ಲಭಿಸಿವೆ ಎಂದು ಜೆಸಿಐ ಪ್ರಕಟಣೆ ತಿಳಿಸಿದೆ. ವಲಯ ಮಟ್ಟದ ಅತ್ಯುತ್ತಮ ಅಧ್ಯಕ್ಷ, ಅತ್ಯುತ್ತಮ ಜೆಸಿ ವೀಕ್, ಅತ್ಯುತ್ತಮ ವಿಶೇಷ ಯೋಜನೆ, ಅತ್ಯುತ್ತಮ ರಾಷ್ಟ್ರೀಯ ಕಾರ್ಯಕ್ರಮ ಪ್ರಶಸ್ತಿ ದೊರೆತಿವೆ. ಅದೇ ರೀತಿ ರಾಷ್ಟ್ರೀಯ ಮಟ್ಟದಲ್ಲಿಯೂ ರಮಾಕಾಂತ್ ಕಾಲಿಕರ್ ಅವರ ಅಧ್ಯಕ್ಷತೆಯ ಅವಧಿಯಲ್ಲಿ ಕೈಗೊಂಡ ವಿವಿಧ ಕಾರ್ಯಕ್ರಮಗಳಿಗೆ ವಿವಿಧ ಪ್ರಶಸ್ತಿಗಳು ಲಭಿಸಿವೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.