ಕ್ರೀಡಾಧಿಕಾರಿಗಳಿಂದ ಲೋಪ; ಸ್ಪೋರ್ಟ್ಸ್ ಕ್ಲಬ್ ಆರೋಪ
ರಾಯಚೂರು: ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮತ್ತು ತರಬೇತಿದಾರರು ಕ್ರೀಡಾಪಟುಗಳ ಆಯ್ಕೆಯಲ್ಲಿ ಲೋಪ ಎಸಗಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಾ. ಬಾಬು ಜಗಜೀವನರಾಂ ಸ್ಪೋರ್ಟ್ಸ್ ಕ್ಲಬ್ ಆರೋಪಿಸಿದೆ. ಈ ಕುರಿತು ಡಿಸಿ ಮತ್ತು ಜಿಪಂ ಸಿಇಒಗೆ ದೂರು ಸಲ್ಲಿಸಿದ್ದು, 5, 6, 7ನೇ ತರಗತಿಯ ಕ್ರೀಡಾಪಟುಗಳ ಆಯ್ಕೆಯಲ್ಲಿ ಸಹಾಯಕ ನಿರ್ದೇಶಕ ಆರ್.ಎಸ್. ಕಣಬರಗಿ ಕ್ರೀಡಾ ತರಬೇತಿದಾರ ಮುದ್ದೇಬಿಹಾಳ ಎಂಬುವವರು ಲೋಪ ಎಸಗಿದ್ದಾರೆ. ಶಾಲೆಗಳಿಗೆ ಮಾಹಿತಿ ನೀಡದೇ ಕೆಲವೇ ಕೆಲ ಕ್ರೀಡಾಪಟುಗಳನ್ನು ಅಧಿಕಾರಿಗಳು ತಮಗೆ ಬೇಕಾದವರನ್ನು ಮಾತ್ರ ಆಯ್ಕೆ ಮಾಡಿದ್ದಾರೆ. ಹಾಗೆಯೇ ಪ್ರತಿ ತಾಲೂಕಿಗೆ ಕ್ರೀಡಾಪಟುಗಳ ಆಯ್ಕೆಗೆ 5 ಸಾವಿರುದಂತೆ ಒಟ್ಟು 30 ಸಾವಿರ ವೆಚ್ಚವಾಗಿರುವುದಾಗಿ ದಾಖಲಿಸಿದ್ದು, ಕಡಿಮೆ ಸಂಖ್ಯೆಯ ಕ್ರೀಡಾಳುಗಳನ್ನು ಆಯ್ಕೆ ಮಾಡಿದ್ದು ವೆಚ್ಚ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ದಾಖಲಿಸಲಾಗಿದೆ ಎಂದು ದೂರಿದ್ದು, ಈ ನಿಟ್ಟಿನಲ್ಲಿ ಕೂಡಲೇ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ಪಪಂ ಜಿಲ್ಲಾ ಸಮಿತಿ ಪದಾಧಿಕಾರಿಗಳು
ರಾಯಚೂರು: ಜಿಲ್ಲಾ ಕಾಂಗ್ರೆಸ್ ಎಸ್ಟಿ ವಿಭಾಗದ ಪದಾಧಿಕಾರಿಗಳ ಪಟ್ಟಿಯನ್ನು ಪಕ್ಷದ ಪಪಂ ವಿಭಾಗದ ಅಧ್ಯಕ್ಷ ರವಿ ಪಾಟೀಲ್ ಬಿಡುಗಡೆಗೊಳಿಸಿದ್ದಾರೆ. ಉಪಾಧ್ಯಕ್ಷರಾಗಿ ಗುಂಡಪ್ಪ ನಾಯಕ, ಬಾಬು, ಈರಯ್ಯ ಮಾನವಿ, ದುರುಗಪ್ಪನಾಯಕ, ಮಹಾಪ್ರಧಾನ ಕಾರ್ಯದರ್ಶಿಗಳಾಗಿ ತ್ರಿಶೂಲನಾಯಕ, ಕೃಷ್ಣಮೂರ್ತಿ ನಾಯಕ, ಬಸವರಾಜ ನಾಯಕ, ಕಾರ್ಯದರ್ಶಿಗಳಾಗಿ ಎಂ.ಪಿ.ನಾಯಕ, ಆದೇಶ ನಾಯಕ, ಗಂಗಾಧರ ನಾಯಕ, ರಮೇಶ್, ಚಂದ್ರಶೇಖರ್ ನಾಯಕ, ಲಕ್ಷ್ಮಣ ಎಂ., ರಾಮಣ್ಣ ನಾಯಕ, ಪ್ರಧಾನ ಕಾರ್ಯದರ್ಶಿಗಳಾಗಿ ವೆಂಕಟೇ ನಾಯಕ ಕೊಲ್ಮಿ, ಶಂಕರ ನಾಯಕ, ಎಚ್.ದೂಳಯ್ಯನಾಯಕ, ಎಂ.ವೆಂಕಟೇಶ ನಾಯಕ, ನರಸಣ್ಣ ನಾಯಕ, ಮಲ್ಲೇಶ ನಾಯಕ, ಮಹಾದೇವಪ್ಪ ನಾಯಕ, ಗೋವಿಂದಪ್ಪ ನಾಯಕ, ಲಕ್ಷ್ಮಣ ಮ್ಯಾದಾರ್, ರಾಮಪ್ಪ ನಾಯಕ, ಮಲ್ಲಿಕಾರ್ಜುನ ಗೋನಾಳ, ಕರಿಯಪ್ಪ ವಕೀಲರು, ರಾಘವೇಂದ್ರ ನಾಯಕ ಹಾಗೂ ರಾಮಣ್ಣ ನಾಯಕ ನೇಮಕಗೊಂಡಿದ್ದಾರೆ. ಸಂಘಟನಾ ಕಾರ್ಯದರ್ಶಿಗಳಾಗಿ ಕರಿಯಪ್ಪ ನಾಯಕ ಮಾನಿಕಯ್ಯ ನಾಯಕ, ಭಗವಂತ್ರಾಯ ನಾಯಕ, ರಂಗಣ್ಣ ದೊರೆ ನೇಮಕಗೊಂಡಿದ್ದು, 19 ಜನರನ್ನು ಸಂಯೋಜಕರಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.