ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಜೂಜು ತಡೆಗೆ ನಿಷ್ಕಾಳಜಿ; ಪಿಎಸ್ಐ ಅಮಾನತು

Rashmi Kasaragodu
Updated On : 5 Jan 2014, 1:49 am

ರಾಯಚೂರು: ಮಟಕಾ ಜೂಜು ತಡೆಯುವಲ್ಲಿ ಕರ್ತವ್ಯಲೋಪ ಎಸಗಿದ ಲಿಂಗಸ್ಗೂರು ತಾಲೂಕಿನ ಮುದಗಲ್ ಪೊಲೀಸ್ ಠಾಣೆಯ ಪಿಎಸ್ಸೈ ಈರಣ್ಣ ಮುದಗಲ್ ಅವರನ್ನು ಎಸ್ಪಿ ಎಂ.ಎನ್. ನಾಗರಾಜ್ ಅಮಾನತುಗೊಳಿಸಿದ್ದಾರೆ. ಈ ಕುರಿತು ಆದೇಶ ಹೊರಡಿಸಿರುವ ಅವರು, ಮುದಗಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಟಕಾ ಮತ್ತಿತರೆ ಜೂಜು ತಡೆಯುವಲ್ಲಿ ಪಿಎಸ್ಸೈ ವಿಫಲರಾಗಿದ್ದಾರೆ. ಸೇವೆ ಸಲ್ಲಿಸುವಲ್ಲಿ ತೋರಿರುವ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದ್ದು,  ಜಿಲ್ಲಾ ಪೊಲೀಸ್ ಇಲಾಖೆಯು ರಚಿಸಿದ ವಿಶೇಷ ತಂಡವು ಈಚೆಗೆ ಕಾರ್ಯಾಚರಣೆ ನಡೆಸಿದ ವೇಳೆ ಮಟಕಾ ಮತ್ತು ಜೂಜಿನ ಅನೇಕ ಪ್ರಕರಣಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಪಿಎಸ್ಸೈ ಈರಣ್ಣ ಮುದಗಲ್ ಅವರನ್ನು ಅಮಾನತು ಮಾಡಲಾಗಿದೆ. ಅದೇ ರೀತಿ ಮತ್ತೊಬ್ಬ ಅಧಿಕಾರಿ ಸಂಗಮೇಶ್ ಶಿವಯೋಗಿ ಅವರಿಗೆ ಜೂಜು ಮಟ್ಟ ಹಾಕುವಲ್ಲಿ ತೋರಿದ ಅಸಡ್ಡೆಗೆ ವಿವರಣೆ ಕೇಳಿ  ನೋಟಿಸ್ ಜಾರಿ ಮಾಡಲಾಗಿದೆ ಎಂದು ಎಸ್ಪಿ ಎಂ.ಎನ್. ನಾಗರಾಜ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement