ನೂತನ ಡಿಡಿಪಿಐಗೆ ಸಿಂಧನೂರಿನಲ್ಲಿ ಸನ್ಮಾನ
ಸಿಂಧನೂರು: ಸಾರ್ವಜನಿಕ ಶಿಕ್ಷಣ ಇಲಾಖೆಯ ನೂತನ ಉಪ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ್ದ ರಾಮಾಂಜನೇಯರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಇತ್ತೀಚೆಗೆ ಸನ್ಮಾನಿಸಲಾಯಿತು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ವಿಷಯ ಪರಿವೀಕ್ಷಕ ಹನುಮಂತಪ್ಪ ಗವಾಯಿ, ಎನ್.ಬಿ. ಕರಂಡಿ, ಅಧೀಕ್ಷಕ ಬಸವರಾಜ, ವ್ಯವಸ್ಥಾಪಕ ಸತೀಶ ಕುಮಾರ, ಬರಡ್ಡೆಪ್ಪ, ಅಮರೇಶ, ಬಸಪ್ಪ ಹ್ಯಾಟಿ, ವೀರಶೇಖರ, ಚಾಂದ್ ಪಾಷಾ, ಪ್ರೇಮಾಕ್ಷಿ ಇದ್ದರು.