ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸ್ವಸಹಾಯ ಸಂಘಗಳಿಗೆ ಪ್ರಗತಿ ನಿಧಿ ಸಾಲ ವಿತರಣೆ

Rashmi Kasaragodu
Updated On : 5 Jan 2014, 1:49 am

ರಾಯಚೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನೆ ಪ್ರಗತಿಬಂಧು ಸ್ವಸಹಾಯ ಸಂಘಗಳಿಗೆ ಈಚೆಗೆ ಪ್ರಗತಿನಿಧಿ ಸಾಲ ವಿತರಣೆ ಕಾರ್ಯಕ್ರಮವನ್ನು ತಾಲೂಕಿನ ವಿವಿಧೆಡೆ ಆಯೋಜಿಸಲಾಗಿತ್ತು.ದೇವಸೂಗೂರು ವಲಯ, ಚಿಕ್ಕಸೂಗೂರು ಮತ್ತು ಯದ್ಲಾಪೂರ ಕಾರ್ಯಕ್ಷೇತ್ರದಲ್ಲಿ ಪ್ರಗತಿ ಬಂಧು ಸ್ವಸಹಾಯ ಸಂಘಗಳಿಗೆ ಪ್ರಗತಿ ನಿಧಿ ಸಾಲ ವಿತರಿಸಲಾಯಿತು. ಈ ಕಾರ್ಯಕ್ಷೇತ್ರಗಳಲ್ಲಿ ರಚಿಸಿದ ಶ್ರೀಮಂಜುನಾಥ, ಶ್ರೀಸೂಗೂರೇಶ್ವರ, ಅಕ್ಷಯ್, ಶ್ರೀಕೃಷ್ಣ, ಶ್ರೀವಿದ್ಯಾ, ದಿವ್ಯಾ, ನಾಗಮ್ಮ, ಬಿಸ್ಮಿಲ್ಲಾ, ಬಿ.ಬಿ. ಫಾತಿಮಾ, ಶ್ರೀಗಣೇಶ, ಭಾಗ್ಯಲಕ್ಷ್ಮಿ, ಫಾತಿಮಾ ಸ್ವಸಹಾಯ ಸಂಘಗಳಿಗೆ ಜಿಲ್ಲೆಯ ನಿರ್ದೇಶಕ ಶೇಖರಗೌಡ ಮತ್ತು ತಾಲೂಕು ಯೋಜನಾಧಿಕಾರಿ ಪುರುಷೋತ್ತಮ ಅವರು ಪ್ರಗತಿ ನಿಧಿ ಸಾಲ ವಿತರಿಸಿದರು. ಈ ಸಂಘಗಳಿಗೆ ಒಟ್ಟು 6 ಲಕ್ಷ ಸಾಲ ನೀಡಲಾಗಿದ್ದು, ಪ್ರಗತಿನಿಧಿ ಸಾಲವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಉದ್ದೇಶದಂತೆ ವಿನಿಯೋಗಿಸಿ ಆರ್ಥಿಕ ಪ್ರಗತಿ ಸಾಧಿಸಬೇಕು. ಹಾಗೆಯೇ ಸಾಲ ಮರುಪಾವತಿಗೂ ಮುಂದಾಗುವಂತೆ ಮನವಿ ಮಾಡಿದರು. ಮೇಲ್ವಿಚಾರಕ ಗಜಾನನ, ಸಿಬ್ಬಂದಿ ಜಂಗ್ಲೆಪ್ಪ, ಲಕ್ಷ್ಮಿ, ರಮೇಶ್, ಭಾರತಿ ಸೇರಿ ಅನೇಕರಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement