ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಹೈ.ಕ. ವಿಭಾಗದ ಗುತ್ತಿಗೆ ನೌಕರರ ಜಿಲ್ಲಾ ಸಮಿತಿ ರಚನೆ

Rashmi Kasaragodu
Updated On : 5 Jan 2014, 1:49 am

ರಾಯಚೂರು: ಹೈ.ಕ. ವಿಭಾಗದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿರುವ ಗುತ್ತಿಗೆ ನೌಕರರ ಜಂಟಿ ಕ್ರಿಯಾಸಮಿತಿಯ ಜಿಲ್ಲಾ ಘಟಕವನ್ನು ರಚಿಸಲಾಗಿದೆ. ವಿಭಾಗೀಯ ಅಧ್ಯಕ್ಷ ವೆಂಕಟರಾಮರೆಡ್ಡಿ ಅವರ ಸೂಚನೆ ಮೇರೆಗೆ ಸಂಘಟನೆಯ ಹಿರಿಯ ಮುಖಂಡರಾದ ವಿಜಯಭಾಸ್ಕರ ಮತ್ತಿತರರ ಉಪಸ್ಥಿತಿಯಲ್ಲಿ ಇತ್ತೀಚೆಗೆ ಸಮಿತಿಯ ಗೌರವಾಧ್ಯಕ್ಷರಾಗಿ ಡಾ. ನಾಗರಾಜ ಮಲ್ಕಾಪೂರೆ ಜಾಲಹಳ್ಳಿ, ಉಪಾಧ್ಯಕ್ಷರಾಗಿ ಡಾ. ಸುನೀತಾ ಗುಂಜಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ರಾಮಚಂದ್ರ ಮ್ಯಾತ್ರೆ, ಸಹಕಾರ್ಯದರ್ಶಿ ಪ್ರಕಾಶ ಕಡಣಿ, ಜಂಟಿ ಕಾರ್ಯದರ್ಶಿಯಾಗಿ ಅಂಬರೀಶಕುಮಾರ್, ಖಜಾಂಚಿಯಾಗಿ ಹಣಮಂತ ಎನ್. ಆಯ್ಕೆಯಾಗಿದ್ದಾರೆ. ಕಾರ್ಯಕಾರಿಣಿ ಸದಸ್ಯರಾಗಿ ಗಂಗಾಧರ, ಸತೀಶ್, ನಾರಾಯಣ ಇನಾಂದಾರ್, ರವಿಕುಮಾರ್, ರಾಜೇಶ ದೇಶಪಾಂಡೆ, ಅಮೃತ, ಮುರಳಿ, ರಾಜೇಶ್ವರಿ ಓಂಪ್ರಸಾದ್, ಪ್ರಮೀಳಾ, ಸಂಗೀತಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಮಿತಿಯ ಶರಣಗೌಡ ಮಾಲಿಪಾಟೀಲ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement