ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಾಹಿತ್ಯ ಸಮ್ಮೇಳನದಲ್ಲಿ ಡಾ. ಮಧುಮತಿ ಉಪನ್ಯಾಸ

Lingaraj Badiger
Updated On : 7 Jan 2014, 12:11 pm

ಸಿಂಧನೂರು: ಮಡಿಕೇರಿಯಲ್ಲಿ ಜರುಗಲಿರುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜ.8ರಂದು ಕನ್ನಡದ ದಾಸ ಸಾಹಿತ್ಯದ ವಿಷಯ ಕುರಿತು ನಡೆಯಲಿರುವ 3ನೇ ಗೋಷ್ಠಿಯಲ್ಲಿ ನಗರದ ಆರ್‌ಜಿಎಂ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರ್ತಿ ಡಾ. ಮಧುಮತಿ ದೇಶಪಾಂಡೆ ಅವರು ದಾಸ ಸಾಹಿತ್ಯ ಮತ್ತು ಮಹಿಳೆ ಕುರಿತು ಉಪನ್ಯಾಸ ನೀಡಲಿದ್ದಾರೆ. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ರಮಾದೇವಿ ಶಂಭೋಜಿ ತಿಳಿಸಿದ್ದಾರೆ.
ಅಭಿನಂದನೆಗಳು: ಮಡಿಕೇರಿಯಲ್ಲಿ ಜರುಗಲಿರುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಾಸ ಸಾಹಿತ್ಯ ಮತ್ತು ಮಹಿಳೆ ಕುರಿತು ಉಪನ್ಯಾಸ ನೀಡಲಿರುವ ಮಧುಮತಿ ದೇಶಪಾಂಡೆ ಅವರಿಗೆ ಜಿಲ್ಲಾ ಕಸಾಪ ಗೌರವಾಧ್ಯಕ್ಷ ಎಸ್.ಶರಣೇಗೌಡ, ಗೌರವ ಕಾರ್ಯದರ್ಶಿ ಎಸ್.ದೇವೇಂದ್ರಗೌಡ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದನೆ ಸಲ್ಲಿಸಿದೆ. ಅಧ್ಯಕ್ಷೆ ರಮಾದೇವಿ ಶಂಭೋಜಿ, ಗೌರವ ಕಾರ್ಯದರ್ಶಿಗಳಾದ ಶ್ರೀಶೈಲ ಕೌದಿ, ವೀರೇಶ ಗೋನವಾರ, ಗೌರವ ಕೋಶಾಧ್ಯಕ್ಷ ಆರ್.ಸಿ. ಪಾಟೀಲ್, ನಾಗರತ್ನ ಬಂಗಾರಶೆಟ್ಟಿ, ಶಿವಲೀಲಾ ಹಿರೇಮಠ, ಜಿಲ್ಲಾ ಚುಸಾಪ ಅಧ್ಯಕ್ಷ ಬೀರಪ್ಪ ಶಂಭೋಜಿ ಅಭಿನಂದನೆ ಸಲ್ಲಿಸಿದ್ದಾರೆ.

--
ವಾಲ್ಮೀಕಿ ನೌಕರರ ಸಂಘದ ಪದಾಧಿಕಾರಿಗಳ ನೇಮಕ
ಸಿಂಧನೂರು: ನಗರದ ಎಪಿಎಂಸಿ ರೈತ ಭವನದಲ್ಲಿ ನಡೆದ ವಾಲ್ಮೀಕಿ ನೌಕರರ ಸಂಘದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ತಾಪಂ ಸಹ ನಿರ್ದೇಶಕ ಶಿವಪ್ಪ ಸುಬೇದಾರ- ಗೌರವಾಧ್ಯಕ್ಷ, ಮಾವಿನಮಡು ಸರ್ಕಾರಿ ಹಿ.ಪ್ರಾ. ಶಾಲೆಯ ಮುಖ್ಯಗುರು ರಾಮಪ್ಪ- ಅಧ್ಯಕ್ಷ, ಸಾಲಗುಂದಾ ಪಿಡಿಒ ಪೂರ್ಣಿಮಾ, ಗ್ರಾಮಲೆಕ್ಕಾಧಿಕಾರಿ ಭೀಮನಗೌಡ- ಉಪಾಧ್ಯಕ್ಷರು, ಶಿಕ್ಷಕ ಮೌನೇಶ- ಪ್ರಧಾನ ಕಾರ್ಯದರ್ಶಿ, ಶಿಕ್ಷಕ ದುಗ್ಗಪ್ಪ- ಸಹಕಾರ್ಯದರ್ಶಿ, ಖಜಾನೆ ಇಲಾಖೆಯ ಎಫ್‌ಡಿಎ ನಾಗರಾಜ ನಾಯಕ- ಖಜಾಂಚಿ, ಶಿಕ್ಷಕರಾದ ರಾಜಗೋಪಾಲ, ವೆಂಕನಗೌಡ ಜಾಲಿಹಾಳ, ಭೀಮನಾಯಕ ರೈತನಗರಕ್ಯಾಂಪ್, ಶಿವಪ್ಪ ಭೋಗಾಪುರ, ಹನುಮೇಶ ಉಪನ್ಯಾಸಕ- ಸಂಘಟನಾ ಕಾರ್ಯದರ್ಶಿಗಳು, ಶಿಕ್ಷಕ ನಾಗರಾಜ ಎಂ., ಉಪನ್ಯಾಸಕ ಬಸವರಾಜ ನಾಯಕ- ಕಾನೂನು ಸಲಹೆಗಾರರು, ಗಾಂಧಿನಗರ ಹಿ.ಪ್ರಾ. ಶಾಲೆ ಮುಖ್ಯಗುರು ಹನುಮಂತಪ್ಪ, ಪ್ರಭಾರಿ ಸಮಾಜ ಕಲ್ಯಾಣಾಧಿಕಾರಿ ರಮೇಶ, ಬಸಾಪುರ ಹಿ.ಪ್ರಾ.ಶಾಲೆ ಮುಖ್ಯಗುರು ಬಸಪ್ಪ, ಶಿಕ್ಷಕಿ ಕವಿತಾರಾಣಿ ಪಗಡದಿನ್ನಿ, ಸಿ.ಆರ್.ಪಿ. ರಾಮಯ್ಯ ಸಲಹಾ ಮಂಡಳಿ ಸದಸ್ಯರಾಗಿ ಆಯ್ಕೆಯಾದರು. ಮಾತನಾಡಿದ ಪ್ರಭಾರಿ ಸಮಾಜ ಕಲ್ಯಾಣಾಧಿಕಾರಿ ರಮೇಶ ಸಮುದಾಯದ ನೌಕರ ಬಂಧುಗಳು ತಮ್ಮ ಕಾರ್ಯಕ್ಷೇತ್ರದಲ್ಲಿ ಭ್ರಷ್ಟಾಚಾರ ರಹಿತ ಸೇವೆ ಸಲ್ಲಿಸುವ ಮೂಲಕ ಮಾದರಿಯಾಗಬೇಕು. ಇತರೆ ಸಮಾಜದ ಎಲ್ಲ ಜನರೊಂದಿಗೆ ಶಾಂತಿ, ಸಹಕಾರದಿಂದ ಬೆರೆತು ಸಮಾಜಕ್ಕೆ ಗೌರವ ತರಬೇಕು ಎಂದು ಕರೆ ನೀಡಿದರು. ವಿವಿಧ ಇಲಾಖೆಯ 200ಕ್ಕೂ ಹೆಚ್ಚು ವಾಲ್ಮೀಕಿ ನೌಕರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement