ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸುಲೋಚನಾಗೆ ಬೀಳ್ಕೊಡುಗೆ

Lingaraj Badiger
Updated On : 7 Jan 2014, 12:11 pm

ಸಿಂಧನೂರು: ನಗರ ಖದ್ರಿಯಾ ಕಾಲೋನಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕಿ ಸುಲೋಚನಾ ಮಸ್ಕಿ ಅವರು ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಶಾಲೆಯ ವತಿಯಿಂದ ಬೀಳ್ಕೊಡಲಾಯಿತು. ಬೀಳ್ಕೊಡುಗೆ ಸಮಾರಂಭದಲ್ಲಿ ಸಿಆರ್ಪಿ ರಾಮದಾಸ ಮಾತನಾಡಿ, 1978ರಲ್ಲಿ ಶಿಕ್ಷಕರಾಗಿ ವೃತ್ತಿಯನ್ನು ಆರಂಭಿಸಿದ ಇವರು 28 ವರ್ಷಗಳ ಕಾಲ ತುರ್ವಿಹಾಳ ಗ್ರಾಮದ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ್ತು 7 ವರ್ಷಗಳಿಂದ ಇದೇ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸುಲೋಚನಾ ಮಸ್ಕಿ ಡಿ.31ರಂದು ಸೇವಾ ನಿವೃತ್ತಿ ಹೊಂದಿದ್ದಾರೆ. ಸತತ 35 ವರ್ಷ 6 ತಿಂಗಳ ಸೇವೆಯನ್ನು ಸಲ್ಲಿಸಿ ಅಪಾರ ಶಿಷ್ಯ ಬಳಗವನ್ನು ನಿರ್ಮಾಣ ಮಾಡಿದ್ದು, ಇವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ನಿವೃತ್ತ ಶಿಕ್ಷಕಿ ಸುಲೋಚನಾ ಮಾತನಾಡಿ, ಶಾಲೆಯ ಎಲ್ಲ ಶಿಕ್ಷಕರು ತಮಗೆ ಸಹಾಯ-ಸಹಕಾರವನ್ನು ನಿರಂತರವಾಗಿ ನೀಡಿದ್ದಾರೆ. ಅವರ ಸಹಾಯ- ಸಹಕಾರಕ್ಕೆ ಆಭಾರಿಯಾಗಿದ್ದೇನೆ ಎಂದರು. ಶಾಲೆಯ ಮುಖ್ಯಗುರು ಅಶ್ಫಾಕ್ ಅಹ್ಮದ್, ಶಿಕ್ಷಕರಾದ ಆಯೀಷಾ ಸುಲ್ತಾನ್, ನಿಸ್ಸಾರ್ ಅಹ್ಮದ್ ಇನಾಂದಾರ್ ಮಾತನಾಡಿದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ಲಾ ಸಾಬ್, ಕನ್ನಡ ಶಾಲೆಯ ಮು.ಗು. ಅಬ್ದುಲ್ ರಹೀಂ ಉಪಸ್ಥಿತರಿದ್ದರು. ಶಿಕ್ಷಕಿ ಹಸೀನಾ ಬೇಗಂ ನಿರ್ವಹಿಸಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ಶಾಲಾ ಎಸ್‌ಡಿಎಂಸಿ ಶಿಕ್ಷಕರು, ಅಡುಗೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ನಿವೃತ್ತಿಗೊಂಡ ಶಿಕ್ಷಕಿ ಸುಲೋಚನಾ ಮಸ್ಕಿ ಅವರನ್ನು ಸನ್ಮಾಸಿ ಗೌರವಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement